ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 AOMSI ನಿಂದ UK ಉತ್ಪಾದಿತ ಬ್ಲ್ಯಾಕ್ ಫಂಗಸ್ ಔಷಧ ಮಂಗಳೂರಿಗೆ: ಶಾಸಕ ಡಾ.ಭರತ್ ಶೆಟ್ಟಿ ಪ್ರಯತ್ನ ಫಲಪ್ರದ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಮಂಗಳೂರು: ಮಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ಔಷಧದ ಕೊರತೆ ಇರುವುದನ್ನು ಮನಗಂಡ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಮಾಡಿದ ವಿಶೇಷ ಪ್ರಯತ್ನದ ಫಲವಾಗಿ Association of Oral and Maxillofacial Surgeons of India ( AOMSI) ಸಂಘಟನೆಯ ಮಾಜಿ ಅಧ್ಯಕ್ಷರಾದ ಡಾ.ಕೃಷ್ಣಮೂರ್ತಿ ಬೋನಂತಾಯ ಹಾಗೂ ಡಾ.ಬದ್ರಿ ಅವರು ಯುನೈಟೆಡ್ ಕಿಂಗಡಂನಿಂದ ಬ್ಲ್ಯಾಕ್ ಫಂಗಸ್ ಗೆ ಬೇಕಾಗಿರುವ Amphotericin ಔಷಧವನ್ನು ಭಾರತಕ್ಕೆ ತರಿಸಿದ್ದಾರೆ.

ಅದನ್ನು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರಿಗೆ ಮಂಗಳವಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ AOMSI ಅಧ್ಯಕ್ಷರಾದ ಡಾ.ಮಂಜುನಾಥ ರೈ ಹಾಗೂ ಮಾಜಿ ಅಧ್ಯಕ್ಷರಾದ ಡಾ.ಮುಸ್ತಫಾ ಖಾದರ್ ಉಪಸ್ಥಿತರಿದ್ದರು. 

ಡಾ.ವೈ ಭರತ್ ಶೆಟ್ಟಿಯವರು ಕೇಂದ್ರ ಹಾಗೂ ರಾಜ್ಯ ಸರಕಾರದೊಂದಿಗೆ ನಿರಂತರ ಸಂವಹನ ನಡೆಸಿದ ಪ್ರಯತ್ನ ಆಡಳಿತಾತ್ಮಕ ಕಾರ್ಯಗಳು ಸುಗಮವಾಗಿ ನಡೆದು ಔಷಧ ಮಂಗಳೂರಿಗೆ ಬರಲು ಸಹಕಾರಿಯಾಯಿತು.

ಬ್ಲ್ಯಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ AOMSI ಸಂಘಟನೆ ಮುಂಚೂಣಿಯಲ್ಲಿದ್ದು, ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿಯೂ ಸರಕಾರದೊಂದಿಗೆ ಕೈಜೋಡಿಸಿದೆ.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم