ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪಾಠ-ಪ್ರವಚನಗಳು ಆರಂಭವಾಗಿವೆ. ಕೊರೊನಾ ಪ್ರೇರಿತ ಲಾಕ್‌ಡೌನ್ ಕಾರಣದಿಂದ ಭೌತಿಕ ತರಗತಿಗಳು ಆರಂಭವಾಗದಿದ್ದರೂ ಆನ್‌ಲೈನ್ ತರಗತಿಗಳು ಆರಂಭವಾಗಿವೆ.
ಲೌಕಿಕ ಜೀವನದ ಉನ್ನತಿಗೆ ಅಗತ್ಯವಿರುವ ಎಲ್ಲ ಆಧುನಿಕ ವಿದ್ಯೆಗಳ ಜತೆಗೆ ಉತ್ತಮ ಚಾರಿತ್ರ್ಯ ನಿರ್ಮಾಣದ ಉದಾತ್ತ ಧ್ಯೇಯದೊಂದಿಗೆ ಭಾರತೀಯ ಜೀವನ ಪದ್ಧತಿಯಲ್ಲಿ ಅವಿನಾಭಾವವಾಗಿ ಹಾಸುಹೊಕ್ಕಿರುವ ರಾಮಾಯಣದ ಬಗ್ಗೆ ವಿಶೇಷವಾದ ಪಾಠ-ಪ್ರವಚನಗಳು ಈ ವಿಶ್ವವಿದ್ಯಾ ಪೀಠದಲ್ಲಿ ಇರುತ್ತವೆ.
ವಾಲ್ಮೀಕಿ ರಾಮಾಯಣದ ಪಠ್ಯ ಭಾಗವನ್ನು ಶ್ರೀ ರಾಮಚಂದ್ರಾಪುರ ಮಠಾಧೀಶರು ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪ್ರೇರಕ-ಕಾರಕ ಹಾಗೂ ಸಂಚಾಲಕ ಶಕ್ತಿಗಳೂ ಆಗಿರುವ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರೇ ಸ್ವತಃ ನಡೆಸಿಕೊಡುತ್ತಿರುವುದು ಇನ್ನೂ ವಿಶೇಷ.
ಬನ್ನಿ, ಶ್ರೀಗಳು ತಮ್ಮ ಅತ್ಯಂತ ಸರಳ ರೀತಿಯಲ್ಲಿ ಕಲಿಸಿಕೊಡುತ್ತಿರುವ ಈ ವಿದ್ಯಾಯಾನದಲ್ಲಿ ನಾವೂ ಸಹಭಾಗಿಗಳಾಗೋಣ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق