ಹರಿಕಿರಣ್ ಹೆಚ್ ಅವರ ಚೊಚ್ಚಿಲ ವೀಡಿಯೋ ಆಲ್ಬಂ ಹಾಡು 'ತೊಟ್ಟಿಲಲಿ' (ಜೋಗುಳ ಹಾಡು) ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಈಗ ತಾನೇ ಪ್ರೀಮಿಯರ್ ಪ್ರಸಾರ ಕಂಡಿದೆ. ಸುಮಾರು 20 ನಿಮಿಷಗಳ ಹಿಂದೆ ಪ್ರೀಮಿಯರ್ ಶೋ ಕಂಡ ಈ ಹಾಡನ್ನು ಇಷ್ಟು ಹೊತ್ತಿನಲ್ಲೇ ನೂರಾರು ಮಂದಿ ವೀಕ್ಷಿಸಿದ್ದಾರೆ.
ಕನ್ನಡ ಚಿತ್ರರಂಗದ ಉದಯೋನ್ಮುಖ, ಪ್ರತಿಭಾವಂತ ಗಾಯಕಿ ವೈಷ್ಣವಿ ರವಿ ಈ ಹಾಡನ್ನು ಹಾಡಿದ್ದಾರೆ. ಅನುಪಮ ಕೀರಿಕ್ಕಾಡು ಅವರ ಸಾಹಿತ್ಯಕ್ಕೆ ಹರಿಕಿರಣ್ ಹೆಚ್ ಸಂಗೀತ ನೀಡಿದ್ದಾರೆ. ವೀಡಿಯೋ ಸಂಕಲನ ಮತ್ತು ನಿರ್ದೇಶನವನ್ನು ಮೋಹಿತ್ ಸದಾಶಿವ್ ನಿರ್ವಹಿಸಿದ್ದಾರೆ. ಸ್ವಾತಿ ಕೆ.ವಿ ಮತ್ತು ಶಕುಂತಲಾ ಸಿ.ಹೆಚ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಅತ್ಯಂತ ಸುಮಧುರವಾಗಿ ಮೂಡಿಬಂದಿರುವ ಈ ಆಲ್ಬಂ ಹಾಡು ಕನ್ನಡಿಗರೆಲ್ಲರಿಗೂ ಇಷ್ಟವಾಗಬಹುದು.
ಜೋಗುಳ ಹಾಡುಗಳು ಅಮ್ಮ ಮತ್ತು ಮಗುವಿನ ನಡುವಿನ ಭಾವನಾತ್ಮಕ ಸಂಬಂಧವನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಶೇಷ ಪಾತ್ರವಹಿಸುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಹೊಸ ಲಾಲಿಹಾಡುಗಳ ಬರವನ್ನು ನೀಗಿಸುವತ್ತ "ತೊಟ್ಟಿಲಲಿ" ಹಾಡು ಕೊಡುಗೆ ನೀಡುತ್ತದೆ ಎಂದು ನಂಬಿದ್ದೇವೆ. ಹಾಡನ್ನು ಕೇಳಿ ಆನಂದಿಸಿ ತಮ್ಮ ಅಭಿಪ್ರಾಯ ಹಾಗೂ ಪ್ರೋತ್ಸಾಹವನ್ನು ಬಯಸುತ್ತೇವೆ ಎಂದು ಆಲ್ಬಂ ಹಾಡಿನ ತಂಡ ಕೋರಿದೆ.
Lyrics | ಸಾಹಿತ್ಯ ತೊಟ್ಟಿಲಲಿ ಮಲಗಿರುವ ನನ್ನ ಕಂದನೆ ಕಣ್ಣಿನಲಿ ತೂಗೋ ನಿನ್ನ ಅಂದವೇ ಕತ್ತಲಲಿ ಬೆಳಗುವ ಚಂದಿರನಂತೆ ತಾರೆಗಳ ಜೊತೆಸೇರಿ ನಾಚುವಂತೆ ನಿನ್ನ ಬಿಂಬವೆ ಕಣ್ಣು ತುಂಬುವೆ ಮಲಗು ಬೇಗನೆ ನನ್ನಾ ದೇವನೇ ಜೋ ಹೇಳುವೆ ಜೋ ಜೋ ಹೇಳುವೆ ರಾತ್ರಿ ಆತು ಮಲಗು ನೀ ಸುಮ್ಮನೇ, ತೊಟ್ಟಿಲಲಿ .... ಜಾರಿ ಬಿದ್ದ ಕಂದಗೆ ಅಮ್ಮ ಕೊಡುವ ಅಪ್ಪುಗೆ ತಾಯಿತನದ ತೊಳಲು ನೀ ಅಳುವ ಮೊದಲು ಹರುಷ ತಂದ ಈ ನಗೆ ಕಂದ ನೀನು ನಕ್ಕರೆ ಮನಸು ತುಂಬೊ ಅಕ್ಕರೆ ತೂಗು ತೊಟ್ಟಿಲ ಒಳಗೆ ಕೂತು ಕರೆದ ಗಳಿಗೆ ಅರಸಿ ಬಂದ ಆಸರೆ |ನಿನ್ನ |
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಧನ್ಯವಾದಗಳು, ನಿಮ್ಮ ಪ್ರೋತ್ಸಾಹಕ್ಕೆ :)
ردحذفإرسال تعليق