ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಗೃಹರಕ್ಷಕ ದಳ ಕಛೇರಿಯಲ್ಲಿ ವನಮಹೋತ್ಸವ ದಿನಾಚರಣೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಮಂಗಳೂರು: “ವಿಶ್ವ ಪರಿಸರ ದಿನ” ಇದರ ಅಂಗವಾಗಿ ಜಿಲ್ಲಾ ಗೃಹರಕ್ಷಕದಳ ಮೇರಿಹಿಲ್ ಮಂಗಳೂರು ಇದರ ಕಛೇರಿಯ ಆವರಣದಲ್ಲಿ ಗೃಹರಕ್ಷಕದಳ ಮತ್ತು ಪೌರರಕ್ಷಣ ಪಡೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ಸಸಿ ವಿತರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಶನಿವಾರ (ಜೂ.5) ಜರುಗಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿ. ಶ್ರೀಧರ್, ವಲಯ ಅರಣ್ಯಾಧಿಕಾರಿ, ಮಂಗಳೂರು ವಲಯ ಇವರು ಮಾತನಾಡಿ, ತಾಪಮಾನ ಬದಲಾವಣೆಯಿಂದಾಗಿ ಅರಣ್ಯ ಮತ್ತು ಮರಗಿಡಗಳಿಂದ ಪರಿಸರ ಮತ್ತು ಅಂತರ್‍ಜಲ ಅಭಿವೃದ್ಧಿಯಾಗುವುದಕ್ಕೆ ಜಾಗೃತಿಕ ಮಟ್ಟದಲ್ಲಿ ಪರಿಸರ ದಿನವನ್ನಾಗಿ ಆಚರಿಸುತ್ತಿದ್ದೇವೆ. ಪರಿಸರದಲ್ಲಿರುವ ಗಾಳಿಯನ್ನು ತೆಗೆದುಕೊಂಡು ಅದರಲ್ಲಿರುವ ನೈಟ್ರೋಜನ್, ಕಾರ್ಬನ್ ಮೊನೋಕ್ಸೈಡ್ ಮತ್ತು ಇತರ ವಿಷಕಾರಿ ಅನಿಲ ತೆಗೆದು ಶುದ್ಧ ಆಮ್ಲಜನಕ ಮಾಡಿ, ಪರಿಶುದ್ಧ ಆಮ್ಲಜನಕ ಯುಕ್ತ ನೈಸರ್ಗಿಕ ಗಾಳಿಯನ್ನು ಸೇವಿಸಿ ಹೆಚ್ಚಿನ ಎಲ್ಲಾ ರೋಗವನ್ನು ತಡೆಯಬಹುದು. ಪರಿಸರದ ಆಕ್ಸಿಜನ್ ಶುದ್ಧವಾಗಿದ್ದಾಗ ಮಾತ್ರ ರೋಗಿಗೆ ಆಕ್ಸಿಜನ್ ಸಿಗಲು ಸಾಧ್ಯವಿದೆ. ಪರಿಸರದಲ್ಲಿ ಎಲ್ಲೆಲ್ಲಿ ಖಾಲಿ ಜಾಗವಿದೆ ಅಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದರು.

ಗೃಹರಕ್ಷಕ ದಳದಿಂದ ಪ್ರತೀ ವರ್ಷ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಖ್ಯಾತ ಪರಿಸರವಾದಿ, ಅರಣ್ಯ ಮಿತ್ರ ಪ್ರಶಸ್ತಿ ವಿಜೇತ ಮಾಧವ ಉಲ್ಲಾಳ್ ಇವರು ಪರಿಸರ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರೂ ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು. ಗಿಡ ನೆಡುವುದು ಮಾತ್ರವಲ್ಲ, ಪರಿಸರ ರಕ್ಷಣೆ, ಗಿಡ ಮರಗಳ ಪೋಷಣೆ ಪ್ರತಿಯೊಬ್ಬ ಪ್ರಜೆಯ ಸಾಮಾಜಿಕ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟರು. ನಿರಂತರವಾಗಿ ಪ್ರತೀ ವರ್ಷ ವನಮಹೋತ್ಸವ ಆಚರಿಸುವ ಜಿಲ್ಲಾ ಗೃಹರಕ್ಷಕ ದಳ ಮತ್ತು ಗೃಹರಕ್ಷಕರನ್ನು ಈ ಸಂದರ್ಭದಲ್ಲಿ ಮಾಧವ ಉಲ್ಲಾಳ್ ಅವರು ಪ್ರಶಂಶಿಸಿದರು.



ಈ ಸಂದರ್ಭದಲ್ಲಿ ಮಂಗಳೂರು ಘಟಕದ ಗೃಹರಕ್ಷಕರಿಗೆ ಒಂದೊಂದು ಗಿಡ ವಿತರಿಸಲಾಯಿತು. ಕಛೇರಿಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಸಾಂಕೇತಿಕವಾಗಿ ಪರಿಸರ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಡಾ|| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ ವಿಶ್ವ ಪರಿಸರ ದಿನ ನಮಗೆಲ್ಲಾ ಅತ್ಯಂತ ಪವಿತ್ರವಾದ ದಿನವಾಗಿದ್ದು, ನಮ್ಮನ್ನು ಪುನ: ಪರಿಸರ ರಕ್ಷಣೆಗೆ ತೊಡಗಿಸಿಕೊಳ್ಳಬೇಕಾದ ದಿನ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ದಳ 7 ವರ್ಷಗಳಿಂದ ನಿರಂತರವಾಗಿ ಗಿಡ ನೆಡುವುದರ ಮೂಲಕ ಪರಿಸರ ಸಂರಕ್ಷಣೆಯನ್ನು ಮಾಡುತ್ತಿದೆ. ಒಬ್ಬ ಗೃಹರಕ್ಷಕನಿಗೆ ಒಂದೊಂದು ಗಿಡ ಎಂಬ ಅಭಿಯಾನವನ್ನು ಆರಂಭಿಸಿ 1000 ಗಿಡಗಳನ್ನು ನೆಡುವುದರ ಮೂಲಕ ಖ್ಯಾತ ಪರಿಸರವಾದಿ ಮಾಧವ ಉಳ್ಳಾಲ್ ಇವರ ನೇತೃತ್ವದಲ್ಲಿ ಆಚರಿಸಲಾಗುತ್ತದೆ. ಇನ್ನು ಮುಂದೆಯೂ ಮಾಧವ ಉಳ್ಳಾಲ್ ಇವರ ಪ್ರೋತ್ಸಾಹ ನಮಗೆ ಸಿಗಲಿ ಎಂದು ಅವರನ್ನು ಅಭಿನಂದಿಸಿದರು.

ಜಿಲ್ಲೆಯಾದ್ಯಂತ 1000 ಗೃಹರಕ್ಷಕರಿದ್ದು ಪ್ರತಿ ವರ್ಷ ಪ್ರತಿಯೊಬ್ಬ ಗೃಹರಕ್ಷಕರು ಒಂದು ಗಿಡ ನೆಟ್ಟಲ್ಲಿ ಸುಂದರ ಸಮೃದ್ಧ ಪರಿಸರ ಸೃಷ್ಟಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕಛೇರಿ ಅಧೀಕ್ಷಕರಾದ ರತ್ನಾಕರ್, ಪೌರರಕ್ಷಣ ತಂಡದ ಅಜಯ್ ಕುಮಾರ್, ಗೃಹರಕ್ಷಕರಾದ ರಮೇಶ್ ಭಂಡಾರಿ, ಬಶೀರ್, ಸುನಿಲ್ ಕುಮಾರ್, ಸುನಿಲ್ ಪೂಜಾರಿ, ಕನಕಪ್ಪ, ಪ್ರಸಾದ್ ಸುವರ್ಣ, ದಿವಾಕರ್, ದುಷ್ಯಂತ್ ರೈ, ಜಯಶ್ರೀ ಕೋಟ್ಯಾನ್ ಇವರುಗಳು ಉಪಸ್ಥಿತರಿದ್ದರು.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

أحدث أقدم