ಈ ಕೊರೋನಾ ಮಹಾಮಾರಿಯಿಂದ ಕಲಿತ ಪಾಠವೆಂದರೆ ಎಷ್ಟು ಆಸ್ತಿ ಹಣ ಸಂಪತ್ತು ಏನೇ ಇರಲಿ ಆರೋಗ್ಯವೇ ಸರಿಯಾಗಿಲ್ಲದಿದ್ದರೆ ಏನಿದ್ದೂ ಪ್ರಯೋಜನಕ್ಕೆ ಬಾರದು ಎಂಬುದು.
ದುಡ್ಡೇ ದೊಡ್ಡಪ್ಪ, ದುಡ್ಡಿಲ್ಲದೆ ಬದುಕು ಅಸಾಧ್ಯ ಎನ್ನುತ್ತಿದ್ದವರು ದೇವರು ಒಳ್ಳೆಯ ಆರೋಗ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುವ ಸ್ಥಿತಿ ಒದಗಿದೆ. ಆದರೆ ಉತ್ತಮ ಆರೋಗ್ಯ ನಮ್ಮದಾಗಲು ಯಾವುದೇ ಶಾರ್ಟ್‌ಕಟ್ ಇಲ್ಲ. ನಮಗೆ ನಾವೇ ಜಾಗ್ರತೆ ವಹಿಸದ ಹೊರತು ಯಾರನ್ನೂ ದೂರಿ ಪ್ರಯೋಜನವಿಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಕೊರೋನಾದ ಜೊತೆಗೆ ಬಿಳಿ, ಕಪ್ಪು, ಹಳದಿ ಶಿಲೀಂದ್ರಗಳು ನಮ್ಮನ್ನು ಬಾಧಿಸುತ್ತಿವೆ. ಸುಭಾಷಿತದಲ್ಲಿ ಒಂದು ಮಾತಿದೆ, ನಿಷ್ಠುರವಾಗಿ ಮಾತನಾಡುವವರನ್ನು, ಸೂರ್ಯೋದಯದ ಸಮಯ ನಿದ್ರಿಸುತ್ತಿರುವವರನ್ನು ಸಾಕ್ಷಾತ್ ವಿಷ್ಣುವೇ ಆಗಲಿ ಲಕ್ಷ್ಮಿಯೇ ಆಗಲಿ ತೊರೆದುಬಿಡುವಳು ಎಂದು. ಇದರಲ್ಲೇ ತಿಳಿದುಕೊಳ್ಳಬಹುದು, ಮಾನಸಿಕ ಮತ್ತು ದೈಹಿಕ ಸ್ವಚ್ಛತೆ ಇಲ್ಲದಲ್ಲಿ ದೇವರೇ ಬರುವುದಿಲ್ಲ ಎಂದು. ಸ್ವಚ್ಛತೆಗೆ ಇರುವ ಮಹತ್ವವನ್ನು ಅರ್ಥಮಾಡಿಕೊಳ್ಳಲು ಇಷ್ಟು ಸಾಲದೇ?
ಕೊರೋನಾ ಹಾಗೂ ಇತರ ವೈರಾಣುಗಳು ಹೇಗೆ, ಎಲ್ಲಿಂದ ಬರುತ್ತವೆ ಎಂಬುದು ತಿಳಿದಿಲ್ಲ. ಆದರೆ ನಮ್ಮ ಜಾಗರೂಕತೆಯಿಂದ ಹಾಗೂ ದೇವರ ಅನುಗ್ರಹದಿಂದ ಮಾತ್ರ ಅವುಗಳನ್ನು ತಡೆಯಲು ಸಾಧ್ಯ. ಇದರಲ್ಲಿ ಬಡವ-ಶ್ರೀಮಂತ ಎಂಬ ಯಾವುದೇ ಭೇದಭಾವಗಳಿಲ್ಲ. ನಾವೆಲ್ಲ ಒಂದೇ ಎಂಬಂತೆ ನಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳುವುದರಿಂದ ನಾವು, ನಮ್ಮ ಕುಟುಂಬ ಹಾಗೂ ಸಮಾಜ ನೆಮ್ಮದಿಯಿಂದ ಬಾಳಲು ಸಾಧ್ಯ.
ಎಲ್ಲರೂ ʼನಮ್ಮ ದೇಶದ ಜನರ ರಕ್ಷಣೆ ನನ್ನ ಕೈಯಲ್ಲಿʼ ಎಂದು ಮನೆಯಲ್ಲೇ ಇದ್ದು ಅವಶ್ಯಕವಿದ್ದಾಗ ಮಾತ್ರ ಮಾಸ್ಕ್ ಹಾಕಿಕೊಂಡು ಹೊರಗೆ ಹೋಗಬೇಕು. ಕೋರೋನಾ ಮುಕ್ತ ದೇಶ ಮಾಡೋಣ ಎಂಬ ಹಂಬಲ ಪ್ರತಿಯೊಬ್ಬರಲ್ಲಿ ಮನಃಸ್ಪೂರ್ವಕವಾಗಿ ಬಂದರೆ ಮಾತ್ರ ಈ ಸಾಂಕ್ರಾಮಿಕದಿಂದ ಮುಕ್ತಿ ಸಾಧ್ಯ.
"ಬೇಧಭಾವ ಬಿಡೋಣ ಕೊರೋನಾ ಓಡಿಸೋಣ"
-ಪ್ರಜ್ವಲ್
ಪ್ರಥಮ ಬಿಎ,ಪತ್ರಿಕೋದ್ಯಮ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಹಂಪನಕಟ್ಟೆ
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق