ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಪ್ರಚಲಿತ: ಪರೀಕ್ಷೆಗೆ ಕೊಡುವ ಮಹತ್ವ ಕಲಿಕೆಗೆ ಯಾಕೆ ನೀಡುತ್ತಿಲ್ಲ? ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಕೊರೊನ ಕಾಲಘಟ್ಟದಲ್ಲಿ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯೇ ಅಡಿಮೇಲಾಗಿ ಬಿಟ್ಟಿದೆ. ಸುಮಾರು ಎರಡು ಶೆೆೈಕ್ಷಣಿಕ ವರುಷಗಳೇ ದಿಕ್ಕು ತಪ್ಪಿದ ಹಡಗಿನಂತಾಗಿದೆ. ಈ ನಷ್ಟವನ್ನು ಯಾವುದೇ ಆಥಿ೯ಕ ಮಾಪನದಿಂದ ಅಳೆಯಲು ಸಾಧ್ಯವಿಲ್ಲ. ಇದು ಬೌದ್ಧಿಕ ಮಾನವ ಸಂಪತ್ತಿನ ಮೇಲಾದ ನಷ್ಟವೆಂದೇ ಪರಿಗಣಿಸಬೇಕಾಗುತ್ತದೆ. ಈ ಕೊರೊನ ಅವಧಿಯಲ್ಲಿ ಅಧ್ಯಯನಶೀಲರಾದ ವಿದ್ಯಾರ್ಥಿಗಳ ಬಗ್ಗೆ ಸರಕಾರಕ್ಕೆ ಹೆತ್ತವರಿಗೂ ವಿಶೇಷವಾದ ಗಮನ ಕಾಳಜಿ ಇರಲೇ ಬೇಕು. ಅದು ಬರೇ ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಮಾತ್ರವಲ್ಲ, ಎಲ್ಲಾ ತರಗತಿಯ ಎಲ್ಲಾ ವಿಷಯಗಳ ಕಲಿಕಾ ವಿದ್ಯಾರ್ಥಿಗಳ ಮೇಲೆ ಸಮಾನವಾದ ಪ್ರೀತಿ, ದಯೆ, ಸಹಾಯಹಸ್ತ ನೀಡಲೇ ಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯೂ ಹೌದು.

ಪರೀಕ್ಷೆಗೆ ತೇೂರುವ ಪ್ರೀತಿ ಕಾಳಜಿ ಕಲಿಕಾ ವ್ಯವಸ್ಥೆಗೆ ನೀಡಿಲ್ಲ? 2020ರಿಂದ ಹಿಡಿದು ಇಂದಿನವರೆಗೆ ಸಸೂತ್ರವಾಗಿ ಸಮಪ೯ಕವಾಗಿ ತರಗತಿಗಳು ನಡೆದಿದೆಯೇ? ಅನ್ನುವುದನ್ನು ಶಿಕ್ಷಣ ಸಚಿವರು, ಶಿಕ್ಷಕರು, ಹೆತ್ತವರು ಗಂಭೀರವಾಗಿ ಆತ್ಮ ವಿಮರ್ಶೆ ಮಾಡಿ ಕೊಳ್ಳಬೇಕಾಗಿದೆ. ಆನ್ಲೆೈನ್ /ಆಫ್‌ ಲೆೈನ್ ಅನ್ನುವ ಗೊಂದಲದಲ್ಲಿಯೇ ಪಾಠ ಮಾಡಿ ಮುಗಿಸಿದ್ದೇವೆ. ಅಂತೂ ಕೊನೆಗೂ ಇದರ ಪ್ರತಿಫಲ ಉಣ್ಣಬೇಕಾದವರು ನಮ್ಮ ವಿದ್ಯಾರ್ಥಿಗಳು ಮತ್ತು ಹೆತ್ತವರು.

ರಾಷ್ಟ್ರ ಮಟ್ಟದ ಶಿಕ್ಷಣ ಇಲಾಖೆ (ಸಿಬಿಎಸ್ಸಿ) ಇದ್ಯಾವ ರಿಸ್ಕು ಬೇಡ ಅಂದುಕೊಂಡು ಹತ್ತು ಹನ್ನೆರಡರ ಪರೀಕ್ಷೆಗಳನ್ನು ರದ್ದು ಮಾಡಿ ಶಾಪ ಮುಕ್ತರಾದರು. ಅವರು ಶಾಪ ಮುಕ್ತರಾದ ದಾರಿಯಲ್ಲಿಯೇ ನಾವು ಶಾಪಮುಕ್ತರಾಗುತ್ತೇವೆ ಅಂದುಕೊಂಡು ನಮ್ಮ ಶಿಕ್ಷಣ ಸಚಿವರು ಕೂಡಾ ಪ್ರಥಮ, ದ್ವಿತೀಯ ಪಿಯುಸಿಗಳ ಪರೀಕ್ಷೆಗಳನ್ನು ರದ್ದು ಮಾಡಿ ಸ್ವಲ್ಪ ಮಟ್ಟಿಗೆ ಅಪಾಯದಿಂದ ಪಾರಾದರು. ಅದೇ ಹತ್ತನೆ ತರಗತಿಗಳಿಗೆ ಸರಳ ರೀತಿಯಲ್ಲಿ ಪರೀಕ್ಷೆ ಮಾಡಿ ಯಾರೂ ಫೆೈಲಾಗದಂತೆ ನೇೂಡಿಕೊಳ್ಳುವ ಭರವಸೆ ಸಚಿವರಿಂದ. ಏನೇ ಆಗಲಿ ಪೂತಿ೯ಯಾಗಿ ಸರ್ಕಾರವನ್ನು ತಪ್ಪಿಸ್ಥರಾಗಿ ಕಾಣುವುದು ಕೂಡಾ ಸರಿಯಲ್ಲ.

ಸರಕಾರಕ್ಕೆ ಬಹುಮುಖ್ಯವಾಗಿ ಕಾಳಜಿ ಇದದ್ದು ಎರಡನೆಯ ವರುಷದ ಸೆೈನ್ಸ್‌  ವಿದ್ಯಾರ್ಥಿಗಳ ಮೇಲೆ ಹೊರತು ಕಾಮರ್ಸ್‌, ಆರ್ಟ್ಸ್‌ ವಿದ್ಯಾರ್ಥಿಗಳ ಮೇಲಲ್ಲ. ಅವರು ಇವತ್ತಲ್ಲ ನಾಳೆ ಅಥವಾ ಕೊರೊನ ಮುಗಿದ ಮೇಲಾದರೂ  ಪಾಸಾಗಿ ಹೇೂಗುತ್ತಾರೆ. ಆದರೆ ನಾಳೆ ಡಾಕ್ಟರ್‌ಗಳು, ಇಂಜಿನಿಯರ್‌ಗಳು ಆಗುವವರ ಗತಿಯೇನು? ಹೆತ್ತವರು ಕೂಡಾ ಅಷ್ಟೇ ಹೆಚ್ಚು ಜೀವ ಬಡಿದುಕೊಂಡಿದ್ದು ಈ ವಿಷಯದ ಮೇಲೇ?

ರಾಷ್ಟ್ರ ಮಟ್ಟದಲ್ಲಿ ಮೆಡಿಕಲ್ ಪ್ರವೇಶಾತಿಗೆ "ನೀಟ್" ಪರೀಕ್ಷೆ ಇದಕ್ಕೂ ನಮ್ಮ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಹಾಗಾಗಿ ನಮ್ಮ ವಿದ್ಯಾರ್ಥಿಗಳಿಗೆ ಯಾವುದೇ  ಬೇೂರ್ಡ್‌ ಪರೀಕ್ಷೆ ಮಾಡದೇ ನೀಟಿಗೆ ನಮ್ಮ ಮಕ್ಕಳನ್ನು ನೇರವಾಗಿ ಕಳುಹಿಸಿ ಬಿಟ್ರೆ ನಮ್ಮ ಕೆಲಸ ಮುಗಿಯಿತು. ಮತ್ತೆ ನೀಟ್-ಬೀಟ್, ಪಾಸು-ಫೇಲು ಅವರ ಹಣೆ ಬರಹ ಅವರು ನೇೂಡಿಕೊಳ್ಳಲಿ. ಅಲ್ಲಿ ಹೇಗಿದ್ದರೂ ಪಿ.ಯು. ಬೇೂರ್ಡ್‌ ಮಾರ್ಕ್ಸ್‌ ಲೆಕ್ಕಕ್ಕೆ ಇಲ್ಲ. ಇನ್ನು ಉಳಿದಿರುವುದು ರಾಜ್ಯದಲ್ಲಿ ಇಂಜಿನಿಯರಿಂಗ್ ಕೇೂರ್ಸ್‌ಗಳಿಗೆ ನಡೆಯಬೇಕಾದ ಸಿಇಟಿ. 

ಅಯ್ಯೇೂ ಪ್ರೌಢ ಶಿಕ್ಷಣ ಸಚಿವರಿಗೆ ಇಲ್ಲಿ ಇನ್ನೊಂದು ಪಾಪ ಪ್ರಜ್ಞೆ ಕಾಡಲು ಶುರು ಮಾಡಿತು. ಈ ಎರಡು ವರುಷ ಸರಿಯಾಗಿ ನಾವು ಪಾಠವನ್ನೇ ಮಾಡಿಲ್ಲ. ಆದರೆ ಸಿಇಟಿ ನೀಟ್‌ನಂತಲ್ಲ, ಇಲ್ಲಿ 50/50. ಇವರಿಗೆ ಎರಡನೇ 50 ಬಗ್ಗೆ ತಲೆ ಬಿಸಿ ಇಲ್ಲ; ಆದರೆ ಮೊದಲ 50 ಬಗ್ಗೇನೆ ಸ್ವಲ್ಪ ಪಾಪ ಪ್ರಜ್ಞೆ ಕಾಡಲು ಶುರುವಾಯಿತು.

ಹಾಗಾಗಿ ಇದಕ್ಕೊಂದು ಉಪಾಯ ಹುಡುಕಿ, ಉನ್ನತ ಶಿಕ್ಷಣ ಸಚಿವರು/ ಉಪ ಮುಖ್ಯಮಂತ್ರಿಗಳಿಗೆ ವಿನಂತಿ ಮಾಡಲು ಹೊರಟಿದ್ದಾರೆ. ಅದೇನೆಂದರೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ಇಂಜಿನಿಯರಿಂಗ್ ಸೀಟ್ ಹಂಚುವ ವ್ಯವಸ್ಥೆ ಮಾಡಿ. ಅಂದರೆ ಇಲ್ಲಿ ವಿದ್ಯಾರ್ಥಿಗಳಿಗೆ ಸೀಟ್ ಸಿಗಲಿಲ್ಲ ಅಂದರೆ ನಾವು ಕಾರಣವಲ್ಲ. ಅದಕ್ಕೆ ವಿದ್ಯಾರ್ಥಿಗಳೇ ಕಾರಣ. ನೀವು ಸಿಇಟಿಗೆ ಸರಿಯಾಗಿ ತಯಾರು ಮಾಡಿಲ್ಲ ಆದ್ದರಿಂದ ಸೀಟು ಸಿಕ್ಕಿಲ್ಲ. ಹೇಗಿದೆ ಬುದ್ದಿವಂತಿಕೆ? ವಿದ್ಯಾರ್ಥಿಗಳು ಹೆತ್ತವರು ಕೇಳಬೇಕಾದದ್ದೂ ಇಷ್ಟೇ. ಸರಿಯಾಗಿ ಪಾಠಗಳೇ ನಡೆಯದಿರುವಾಗ ಸಿಇಟಿ ಎದುರಿಸುವುದಾರೂ ಹೇಗೆ?

ಬಹುಮುಖ್ಯವಾಗಿ ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಗಳನ್ನು ಎದುರಿಸುವುದು ತುಂಬಾ ಕಷ್ಟ ಅನ್ನುವುದು ಹಿಂದಿನ ಎಲ್ಲಾ ಪರೀಕ್ಷೆಗಳಲ್ಲಿ ಸಾಬೀತಾಗಿದೆ. ಹಾಗೇನ್ನುವಾಗ ಇಂತಹ ಬಡ ಅಸಹಾಯಕ ವಿದ್ಯಾರ್ಥಿಗಳನ್ನು ಸಿಇಟಿ ಕೂಪಕ್ಕೆ ತಳಿ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುವುದು ಬೇಡ. ನಮ್ಮ ವಿದ್ಯಾರ್ಥಿಗಳು ಅಷ್ಟೋ ಇಷ್ಟೋ ಪಿಯು ಬೇೂರ್ಡ್‌ ಪರೀಕ್ಷೆಯಲ್ಲಿ ಗಳಿಸುವ ಅಂಕವನ್ನು ಸಿಇಟಿಗೆ ಸೇರಿಸಿ ಹೆಚ್ಚು ಅನುಕೂಲವಾಗುವಂತೆ ತಾಂತ್ರಿಕ ಕೇೂರ್ಸ್‌ಗಳಿಗೆ ಪ್ರವೇಶಾತಿ ನಡೆಸಿ ಅನ್ನುವುದು ನಮ್ಮ ಅಭಿಪ್ರಾಯ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು