ಆಲಿಸಿ: ಭಕ್ತಿಗೀತೆ- ಕುಲಕುಲಕಲವೆನ್ನುತಿಹರು
ರಚನೆ: ಶ್ರೀ ಕನಕದಾಸರು
ಗಾಯನ: ಶ್ರೀ ವಿದ್ಯಾಭೂಷಣರು
ಕುಲಕುಲ ಕುಲವೆನ್ನುತಿಹರೂ||2||
ಕುಲವ್ಯಾವುದು
ಸತ್ಯ ಸುಖವುಳ್ಳ ಜನರಿಗೆ
||ಕುಲವ್ಯಾವುದು||
||ಕುಲಕುಲ||
ಕೆಸರೊಳು ತಾವರೆ ಹುಟ್ಟಲು ಅದತಂದು
ಬಿಸಜನಾಭನಿಗೆ ಅರ್ಪಿಸಲಿಲ್ಲವೆ
||ಕೆಸರೊಳು||
ಹಸುವಿನ ಮಾಂಸದೊಳು
ಉತ್ಪತ್ತಿ ಕ್ಷೀರವು ||ಹಸುವಿನ||
ವಸುದೆಯೊಳಗೆ ಭೂಸುರರುಣ್ಣಲಿಲ್ಲವೆ
||ಕುಲಕುಲ||
ಮ್ರಘಗಳ ಮೈಯಲ್ಲಿ ಹುಟ್ಟಿದ ಕಸ್ತೂರಿ
ತೆಗೆದು ಪೂಸುವರು ಭೂಸುರರು
||ಮ್ರಘಗಳ||
ಒಗೆಯಿಂದ ನಾರಾಯಣ ಯಾವ ಕುಲದವ||2||
ಅಗಜವಲ್ಲಭನು ಯಾತರ ಕುಲದವನು
||ಕುಲಕುಲ||
ಆತ್ಮ ಯಾವ ಕುಲ ,ಜೀವ ಯಾವ ಕುಲ
ತತ್ವೇಂದ್ರಿಯಗಳ ಕುಲ ಪೇಳಿರಯ್ಯ
||ಆತ್ಮ||
ಆತ್ಮಾಂತರಾತ್ಮ ನೆಲೆಯಾದಿ ಕೇಶವ||2||
ಆತನೊಲಿದ ಮೇಲೆ ಯಾತರಕುಲವಯ್ಯ
||ಕುಲಕುಲ||
إرسال تعليق