ಶಿಕ್ಷಕನೆಂದರೆ ಹೇಗಿರ ಬೇಕು
ಮಕ್ಕಳ ಪ್ರೀತಿಯ ಗಳಿಸಿರ ಬೇಕು ||
||ಪಲ್ಲವಿ||
ನಿಷ್ಠೆಲಿ ಪಾಠವ ಮಾಡಲು ಬೇಕು
ಕಷ್ಟವ ನೀಗಲು ಹರಸಲು ಬೇಕು|
ಬದುಕಿಗೆ ದಾರಿಯ ತೋರಲು ಬೇಕು
ಮಮತೆಲಿ ಶಿಷ್ಯರ ಸಲಹಲು ಬೇಕು ||
ಪಾಠದ ಜತೆಯಲಿ ಆಟವು ಬೇಕು
ಜ್ಞಾನವ ಗಳಿಸಲು ವಿದ್ಯೆಯು ಬೇಕು |
ವಿದ್ಯೆಯು ಬುದ್ಧಿಯು ಮನುಜಗೆ ಬೇಕು
ಬೋಧಿಪ ಗುರುವಲಿ ಭಕ್ತಿಯು ಬೇಕು ||
ಕಲಿಸಲು ಗುರುವಿಗೆ ಸಿದ್ಧತೆ ಬೇಕು
ಮಕ್ಕಳ ಮನವನು ಒಲಿಸಲು ಬೇಕು |
ತಾಯಿಯ ಮಮತೆಯ ತೋರಲು ಬೇಕು
ತಂದೆಯ ಪ್ರೀತಿಯ ನೀಡಲು ಬೇಕು ||
ಹಗಲೂ ರಾತ್ರಿಯು ಸಾಧಿಸ ಬೇಕು
ಸಾಧನೆ ಹಾದಿಲಿ ಸಾಗಲು ಬೇಕು |
ಕಲಿಸಿದ ಗುರುವಿಗೆ ನಮಿಸಲು ಬೇಕು
ಮರೆಯದೆ ಗೌರವ ಸಲ್ಲಿಸ ಬೇಕು ||
ಗುರುವಿನ ಗುಲಾಮನಾಗಲು ಬೇಕು
ಅರಿವನು ಹಂಚುತ ಬೆಳಗಲು ಬೇಕು |
ನೀತಿಯ ನಿಯಮವನರಿಯಲು ಬೇಕು
ಶಾಲೆಯು ದೇಗುಲ ತಿಳಿದಿರ ಬೇಕು ||
ಉಜ್ವಲ ಭವಿಷ್ಯ ನಮಗಿರ ಬೇಕು
ಆಗಸದೆತ್ತರಕೇರಲು ಬೇಕು |
ದೇಶವ ಕಟ್ಟುವ ಛಲವಿರ ಬೇಕು
ಗುರುವಿನ ಪಾದಕೆ ಮಣಿಯಲು ಬೇಕು ||
ಶಿಕ್ಷಕನೆಂದರೆ ಆತ ಶಿಕ್ಷಕನೂ ಹೌದು, ವಿದ್ಯಾರ್ಥಿಯೂ ಹೌದು.ಆದರೆ ವಿದ್ಯಾರ್ಥಿಯೆಂದರೆ ವಿದ್ಯಾರ್ಥಿ ಮಾತ್ರ. ಭವಿಷ್ಯದ ಸಮರ್ಥ ಪ್ರಜೆಗಳನ್ನು ರೂಪಿಸುವ ಸಕಲ ಶಿಕ್ಷಕ ಬಂಧುಗಳಿಗೂ ಶಿಕ್ಷಕರ ದಿನದ ಶುಭಾಶಯಗಳು.
-ವಿ.ಬಿ.ಕುಳಮರ್ವ, ಕುಂಬ್ಳೆ
ಹಾಡಿದವರು
1. ಅವನಿಶ್ರೀ ಕುಳಮರ್ವ
2. ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق