ಆಲಿಸಿ: ಭಕ್ತಿಗೀತೆ- ದಾಸನಾಗು ವಿಶೇಷನಾಗು
ಗಾಯಕರು: ಪುತ್ತೂರು ನರಸಿಂಹ ನಾಯಕ್
ಏಸು ಕಾಯಂಗಳ ಕಳೆದು 
ಎಂಬತ್ತನಾಲ್ಕು ಲಕ್ಷ ಜೀವರಾಶಿಯನ್ನು 
ದಾಟಿ ಬಂದ ಇ ಶರೀರ||ಏಸು||
ತಾನಲ್ಲ ತನ್ನದಲ್ಲ||2|| 
ಆಸೆ ತರವಲ್ಲ ಮುಂದೆಬಹುದಲ್ಲಾ...
ದಾಸನಾಗು ವಿಶೇಷನಾಗು ||4||
ಆಶ ಕ್ಲೇಶ ದೋಷವೆಂಬ ಅಬ್ಧಿಯೊಳು 
ಮುಳುಗಿ ಯಮನ ಪಾಶಕ್ಕೊಳಗಾಗದೆ 
ನಿರ್ದೋಷಿಯಾಗು ಸಂತೋಷಿಯಾಗು
                                      ||ಆಶ ಕ್ಲೇಶ||
ಕಾಶಿ, ವಾರಣಾಸಿ, ಕಂಚಿ, ಕಾಳಹಸ್ತಿ, 
ರಾಮೇಶ್ವರ ಏಸು ದೇಶ ತಿರುಗಿದರೆ ಬಹುದೇನು, 
ಅಲ್ಲಿ ಹೋದೇನು.
ದೋಷ ನಾಶ ಕ್ರಷ್ಣವೇಣಿ, ಗಂಗೆ, ಗೋದಾವರಿ
ಭವನಾಶಿ ತುಂಗಭದ್ರೆ, ಯಮುನೆ ವಾಶದಲ್ಲಿ
ಉಪವಾಸದಲ್ಲಿ
ಮೀಸಲಾಗಿ ಮಿಂದು ಜಪ ತಪ 
ಹೋಮ ನೇಮಗಳ ಏಸು ಬಾರಿ 
ಮಾಡಿದರು ಫಲವೇನು ಇ ಛಲವೇನು
                                   ||ದಾಸನಾಗು||
ಅಂದಿಗೊ ಇಂದಿಗೊ ಒಮ್ಮೆ 
ಸಿರಿ ಕಮಲೇಶನನ್ನು, ಒಂದು ಬಾರಿಯಾರು 
ಹಿಂದೆ ನೆನೆಯಲಿಲ್ಲ ,ಮನ ದಣಿಯಲಿಲ್ಲಾ
                                  ||ಅಂದಿಗೋ||
ಬಂದು ಬಂದು ಭ್ರಮೆಗೊಂಡು  
ಮಾಯಮೋಹಕ್ಕೆ ಸಿಕ್ಕಿ
ನೊಂದುಬೆಂದು ಒಂದರಿಂದ ಉಳಿಯಲಿಲ್ಲ
ಬಂದ ಕಳೆಯಲಿಲ್ಲ
ಸಂದೇಹವ ಮಾಡದಿರು 
ಆರಿವು ಎಂಬ ದೀಪ ಬಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ 
ಹಾಗೆ ಬ್ರಹ್ಮಾಂಡ
ಇಂದು ಹರಿಯಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನಿಂದ ಮುಕ್ತಿ ಬೇಡು ಕಂಡ್ಯ
ನೀ ನೋಡು ಕಂಡ್ಯಾ.....
                                        ||ದಾಸನಾಗು||
ನೂರುಬಾರಿ ಶರಣು ಮಾಡಿ 
ನೀರ ಮುಳುಗಲ್ಯಾಕೆ ಪರನಾರಿಯರ 
ನೋಟಕೆ ಗುರಿಯ ಮಾಡಿದಿ, 
ಮನ ಸೆಳೆಯ ಮಾಡಿದಿ||ನೂರು||
ಸೂರೆಯೊಳು ಸೂರೆ ತುಂಬಿ
ಮೇಲೆ ಹೂವಿನ ಹಾರ
ಗೀರುಗಂಧ ಅಕ್ಷತೆಯ ಧರಿಸಿದಂತೆ
ನೀ ಮೆರೆಸಿದಂತೆ
ಗಾರುಡಿಯ ಮಾತ ಬಿಟ್ಟು 
ನಾದಬ್ರಹ್ಮನ ಪಿಡಿದು, 
ಸಾರಿಸೂರಿ ಮುಕ್ತಿಯನ್ನು ಶಮನದಿಂದ 
ಮತ್ತೆ ಸುಮನದಿಂದ
ನಾರಾಯಣ, ಅಚ್ಯುತಾ, ಅನಂತಾದಿ, ಕೇಶವನಾ......ಆಆ...ಆಆಆ...ಆಆಆ..ಆಆಆಆ..
ನಾರಾಯಣ, ಅಚ್ಯುತಾ, ಅನಂತಾದಿ, ಕೇಶವನ 
ಸಾರಾಮ್ರತವನ್ನುಂಡು ಸುಕಿಸೊ 
ಲಂಢಜೀವವೇ ಎಲೋ ಭಂಢ ಜೀವವೇ..
                                    ||ದಾಸನಾಗು||
                                 ||ಏಸು ಕಾಯಂಗಳ||
إرسال تعليق