ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಕನಕ-ನಮನ-ಗಾಯನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಆಲಿಸಿ: ಕನಕ-ನಮನ-ಗಾಯನ

ಸಾಹಿತ್ಯ: ಲಕ್ಷ್ಮೀ ವಿ. ಭಟ್, ಮಂಜೇಶ್ವರ

ಸಂಗೀತ: ಅನುಪಮಾ ಮಂಜುನಾಥ



ಕನಕ- ನಮನ-ಗಾಯನ


ಬೀರಪ್ಪ ಬಚ್ಚಮ್ಮ ವೀರಸುತ ತಿಮ್ಮಪ್ಪ

ಸಾರಿಹರು ಹರಿದಾಸ ಸಾಹಿತ್ಯವ|

ದಾರಿಯನು ತೋರುತ್ತ ಮೇರುತನ ನಿಷ್ಠೆಯಲಿ

ಸೇರಿಹನು ಕೃಷ್ಣನಾ ಹೃದಯದಲ್ಲಿ||೧||


ಕ್ರಾಂತಿಯನು ಮಾಡುತ್ತ ಶಾಂತಿಯನು ಸಾರುತ್ತ

ಕಾಂತಿಯನು ನೀಡಿಹರು ಕಣ್ಣು ತೆರೆಸಿ|

ಭ್ರಾಂತಿಯನು ಕಿತ್ತೊಗೆದು ಕಾಂತನನು ನೆನೆಯುತ್ತ

ಕಾಂತೆಯನು ಮರೆತಿಹನು ವೈರಾಗ್ಯದಿ||೨||


ಉಪ್ಪರಿಗೆ ಮನೆಮೋಹ ಕೊಪ್ಪರಿಗೆ ಹೊನ್ನಿರಲು

ಕುಪ್ಪಳಿಸಿ ನೆಗೆಯದೆಯೆ ದಾನನೀಡಿ |

ಅಪ್ಪಿರುವ ಬಡತನಕೆ ಕಪ್ಪುರದ ತೆರದಲ್ಲಿ

ಬಪ್ಪ ದುರಿತವನಾಶ ಮಾಡುತ್ತಲಿ||೩||


ಜಾತಿಯಲಿ ಕೀಳೆಂದು ಸೋತಿರುವ ಹೃದಯಗಳ

ಭೀತಿಯನು ಕಳೆದಿಹನು ಕನಕದಾಸ|

ಪ್ರೀತಿಯನು ತೋರುತ್ತ ಮಾತಿನಲಿ ನಯವಾಗಿ

ಹೂತಿರುವ ಕುಲಧರ್ಮ ನಾಶಗೈದು||೪||


ಮೇರು ಭಕ್ತಿಯ ತೋರಿ ನೇರ ನಡೆಯಲಿ ಸಾಗಿ

ಸಾರಿಹನು ಹರಿದಾಸ ಸಾಹಿತ್ಯವ|

ಕೇರಿಕೇರಿಯ ತಿರುಗಿ ಸಾರಸತ್ವವನುಣಿಸಿ

ಪಾರುಮಾಡಲು ಬೇಡಿ ತಾನ್ ಹರಿಯನು ||೫||


ಕಾಂತ - ಒಡೆಯ (ಶ್ರೀಹರಿ)

ಕಾಂತೆ - ಮಡದಿ, ಸಂಪತ್ತು.


-ಲಕ್ಷ್ಮೀ ವಿ ಭಟ್, ಮಂಜೇಶ್ವರ



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

أحدث أقدم