ಆಲಿಸಿ: ಭಕ್ತಿಗೀತೆ- ಓಂ ಗಂ ಗಣಪತಯೇ ನಮಃ
ಗಾಯನ: ಶ್ರೀ ವಿದ್ಯಾಭೂಷಣರು
ಓ೦ ಗಂ ಗಣಪತಯೇ ನಮಃ ||2||
ಕಡುಕರುಣಿಯೆ ಹೇರೊಡಲನೆ ಒಡೆಯನ
ಅಡಿಗಳ ಸ್ತುತಿಸುವ ಭಾಗ್ಯವ ಕರುಣಿಸು
||ಕಡುಕರುಣಿಯೆ||
ನಡುವೆ ಬರುತಿರ್ಪ ವಿಘ್ನವ ತಡೆದು ||2||
ನುಡಿದು ನುಡಿಸು ಹರಿಸ್ತುತಿಯೆನ್ನಿಂದ ||2||
ಓ೦ ಗಂ ಗಣಪತಯೇ ನಮಃ||2||
ಸಿದ್ಧ ವಿದ್ಯಾಧರ, ಸುಜನಾರಾಧ್ಯನೆ
ಸಿದ್ಧಿದಾಯಕನೆ ವ್ರದ್ಭವನೆ ||ಸಿದ್ಧ ||
ಬುದ್ಧಿ ವಿದ್ಯೆಯನು, ಜ್ಞಾನ ಭಲವನು||2||
ಶುದ್ಧ ಭಕುತಿಯಿತ್ತು ಕಾವುದೆಮ್ಮನು||2||
ಓ೦ ಗಂ ಗಣಪತಯೇ ನಮಃ||2||
ಜಯ ಜಯ ಗಣಪತಿ ವಿಘ್ನವಿನಾಯಕ
ಜಯ ನಾರದಪ್ರಿಯ ಜಯ ವಿಭುದ್ದೋತ್ತಮ
||ಜಯ ಜಯ||
ಜಯ ಜಯ ವಿಭುಸನ್ನುತ ಶುಭಚರಿತನೆ||2||
ಜಯ ಜಯ ಇಡಗುಂಜಿಲಿ ನೆಲೆಸಿಹನೆ||2||
ಓ೦ ಗಂ ಗಣಪತಯೇ ನಮಃ||2||
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق