ಕ್ಯಾಸೆಟ್ ಯುಗಕ್ಕಿಂತಲೂ ಹಿಂದೆ, ಗ್ರಾಮೊಫೋನ್ ತಟ್ಟೆಗಳಲ್ಲಿ ಧ್ವನಿಮುದ್ರಣ ನಡೆಯುತ್ತಿದ್ದ ಕಾಲದ ನಾಲ್ಕು ಭಕ್ತಿಗೀತೆಗಳಿವು. ಮಂಗಳೂರಿನ ಶರವು (ಮಹಾಗಣಪತಿ), ಮಂಗಳಾದೇವಿ, ಕದ್ರಿ (ಮಂಜುನಾಥಸ್ವಾಮಿ) ಮತ್ತು ಕುದ್ರೋಳಿ (ಗೋಕರ್ಣನಾಥೇಶ್ವರ) ದೇವಸ್ಥಾನಗಳನ್ನು ಕುರಿತಾದುವು. ಮಂಗಳೂರಿನ ವಿಜಯಕುಮಾರ್ ಎಂಬ ಪ್ರತಿಭಾವಂತ ತರುಣರೊಬ್ಬರು ತಾವೇ ಬರೆದು ಸ್ವರಸಂಯೋಜಿಸಿ ಮದರಾಸಿನ ಎ.ಎ.ರಾಜ್ ಎಂಬುವವರ ಆರ್ಕೆಸ್ಟ್ರಾ ಸಹಯೋಗದೊಂದಿಗೆ ಬಿ.ಕೆ.ಸುಮಿತ್ರಾ ಮತ್ತು ಪಿ.ಬಿ.ಶ್ರೀನಿವಾಸ್ ಅವರಿಂದ ಹಾಡಿಸಿದ ಗೀತೆಗಳು. ಕರಾವಳಿ ಪ್ರದೇಶದಲ್ಲಿ ಈಗಲೂ ಅತ್ಯಂತ ಜನಪ್ರಿಯವಾಗಿರುವಂಥವು.
ತಮ್ಮ ಮಿತ್ರರೊಬ್ಬರು ಗುಜರಿ ಅಂಗಡಿಯಿಂದ ಸಂಗ್ರಹಿಸಿದ ಗ್ರಾಮೊಫೋನ್ ತಟ್ಟೆಯಲ್ಲಿ ಈ ಗೀತೆಗಳು ಸಿಕ್ಕಿದವಂತೆ ಚಿದಂಬರ ಕಾಕತ್ಕರರಿಗೆ. ಅವುಗಳನ್ನು ಗ್ರಾಮೊಫೋನ್ ತಟ್ಟೆಯಿಂದ ಕಂಪ್ಯೂಟರ್‌ಗೆ ವರ್ಗಾಯಿಸಿ mp3 ರೂಪಾಂತರಗೊಳಿಸಿ ಹಂಚಿಕೊಂಡಿದ್ದಾರೆ. ನೀವೂ ಒಮ್ಮೆ ಕೇಳಿ ಆನಂದಿಸಿ.
1. ಶರವು ಮಹಾಗಣಪತಿ ನಮಗೆ ನಿನ್ನದೇ ಸ್ತುತಿ...
2. ಶ್ರೀಮಂಗಳಾದೇವಿ ನಿನಗೆ ಪ್ರಣಾಮ...
3. ಕದಲೀವನದಲಿ ಶ್ರೀಮಂಜುನಾಥ ಪರಶುರಾಮನ ಸೃಷ್ಟಿಯ ಕ್ಷೇತ್ರ...
4. ಶ್ರೀನಾರಾಯಣ ಗುರುಸ್ವಾಮಿಯೇ...
ಕೃತಜ್ಞತೆಗಳು: ಶ್ರೀವತ್ಸ ಜೋಷಿ, ವಾಷಿಂಗ್ಟನ್
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق