ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಸಂದಿತಯ್ಯಾ ಪ್ರಾಯವು ಕೃಷ್ಣಾ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad ಆಲಿಸಿ: ಭಕ್ತಿಗೀತೆ- ಸಂದಿತಯ್ಯಾ ಪ್ರಾಯವು ಕೃಷ್ಣಾ

ರಚನೆ: ಪುರಂದರ ದಾಸರು

ಗಾಯಕರು: ಪುತ್ತೂರು ನರಸಿಂಹ ನಾಯಕ್


 ಸಂದಿತಯ್ಯಾ ಪ್ರಾಯವು ಸಂದಿತಯ್ಯಾ ಕೃಷ್ಣಾ....||2||
ಒಂದು ದಿನವು ಸುಖವು ಇಲ್ಲ 
ಕುಂದಿ ಹೋದೆ ಕಷ್ಟದಿಂದ||ಒಂದು||
ಬಂಧನವನು ಬಿಡಿಸುದೆನ್ನ 
ತಂದೆ ನೀನೆ ರಕ್ಷಿಸಯ್ಯ
                                ||ಸಂದಿತಯ್ಯಾ||

ತಂದೆ ಉದರದಿ ಮೂರು ತಿಂಗಳು 
ಸಂದು ಹೋಯಿತು ತಿಳಿಯದೆ||ತಂದೆ||
ಬೆಂದೆ ನವಮಾಸದೊಳು ಗರ್ಭದಿ 
ನಿಂದು ತಾಯಿಯ ಗರ್ಭದಿ
ಕುಂದಿತಾಯುವು ಒಂದು ವರ್ಷ 
ಇಂದಿರೇಶನೆ ಕೇಳು ದುಃಖವ 
ಬಂಧನದೊಳಗೆ ನಿಂದೆನನುದಿನ 
ಮುಂದೆ ಮೋಕ್ಷದ ಮಾರ್ಗ ಕಾಣದೆ
                               ||ಸಂದಿತಯ್ಯಾ||

ಕತ್ತಲೆಯೊಲಿರಲಾರೆ ಎನುತಲಿ 
ಹೊತ್ತೆ ಹರಕೆಯ ನಿನ್ನೊಲು||ಕತ್ತಲೆ||
ನಿತ್ಯದಲಿ ಮಲಮೂತ್ರ ಬಾಲ್ಯದಿ 
ಹೊತ್ತು ಕಳೆದೆನು ಎನ್ನೊಲು
ಮತ್ತೆ ಹದಿನಾರರ ಪ್ರಾಯದಿ 
ಉಕ್ಕಿ ನಡೆದೆನು ಧರೆಯೊಲು
ಹತ್ತಿ ಸಂಸಾರದ ಮಾಯೆಯು 
ಸಿಕ್ಕಿದೆನು ಭವ ಬಲೆಯೊಲು
                      ||ಸಂದಿತಯ್ಯಾ||

ಎಡೆಬಿಡದೆ ಅನುದಿನವು ಪಾಪದ 
ಕಡಲೊಲಗೆ ನಾ ಬಿದ್ದೆನೊ||ಎಡೆಬಿಡದೆ||
ದಡವ ಕಾಣದೆ ದುಃಖದೊಳು 
ಬೆಂದೊಡಳೊಲಗೆ ನಾನೊಂದೆನೊ
ಬಿಡದೆ ನಿನ್ನಯ ಧ್ಯಾನವೆಂದೆಂಬ 
ಹಡಗ ಏರಿಸು ಎಂದೆನೊ
ಧ್ರಡದಿ ನಿನ್ನಯ ಪಾದ ಸೇರಿಸೊ 
ಒಡೆಯ ಪುರಂದರ ವಿಠ್ಠಲಾ.....
                                  ||ಸಂದಿತಯ್ಯಾ||


(ಉಪಯುಕ್ತ ನ್ಯೂಸ್)

Post a Comment

أحدث أقدم