ಆಲಿಸಿ: ಭಕ್ತಿಗೀತೆ- ಸಂದಿತಯ್ಯಾ ಪ್ರಾಯವು ಕೃಷ್ಣಾ
ರಚನೆ: ಪುರಂದರ ದಾಸರು
ಗಾಯಕರು: ಪುತ್ತೂರು ನರಸಿಂಹ ನಾಯಕ್
ಸಂದಿತಯ್ಯಾ ಪ್ರಾಯವು ಸಂದಿತಯ್ಯಾ ಕೃಷ್ಣಾ....||2||
ಒಂದು ದಿನವು ಸುಖವು ಇಲ್ಲ
ಕುಂದಿ ಹೋದೆ ಕಷ್ಟದಿಂದ||ಒಂದು||
ಬಂಧನವನು ಬಿಡಿಸುದೆನ್ನ
ತಂದೆ ನೀನೆ ರಕ್ಷಿಸಯ್ಯ
||ಸಂದಿತಯ್ಯಾ||
ತಂದೆ ಉದರದಿ ಮೂರು ತಿಂಗಳು
ಸಂದು ಹೋಯಿತು ತಿಳಿಯದೆ||ತಂದೆ||
ಬೆಂದೆ ನವಮಾಸದೊಳು ಗರ್ಭದಿ
ನಿಂದು ತಾಯಿಯ ಗರ್ಭದಿ
ಕುಂದಿತಾಯುವು ಒಂದು ವರ್ಷ
ಇಂದಿರೇಶನೆ ಕೇಳು ದುಃಖವ
ಬಂಧನದೊಳಗೆ ನಿಂದೆನನುದಿನ
ಮುಂದೆ ಮೋಕ್ಷದ ಮಾರ್ಗ ಕಾಣದೆ
||ಸಂದಿತಯ್ಯಾ||
ಕತ್ತಲೆಯೊಲಿರಲಾರೆ ಎನುತಲಿ
ಹೊತ್ತೆ ಹರಕೆಯ ನಿನ್ನೊಲು||ಕತ್ತಲೆ||
ನಿತ್ಯದಲಿ ಮಲಮೂತ್ರ ಬಾಲ್ಯದಿ
ಹೊತ್ತು ಕಳೆದೆನು ಎನ್ನೊಲು
ಮತ್ತೆ ಹದಿನಾರರ ಪ್ರಾಯದಿ
ಉಕ್ಕಿ ನಡೆದೆನು ಧರೆಯೊಲು
ಹತ್ತಿ ಸಂಸಾರದ ಮಾಯೆಯು
ಸಿಕ್ಕಿದೆನು ಭವ ಬಲೆಯೊಲು
||ಸಂದಿತಯ್ಯಾ||
ಎಡೆಬಿಡದೆ ಅನುದಿನವು ಪಾಪದ
ಕಡಲೊಲಗೆ ನಾ ಬಿದ್ದೆನೊ||ಎಡೆಬಿಡದೆ||
ದಡವ ಕಾಣದೆ ದುಃಖದೊಳು
ಬೆಂದೊಡಳೊಲಗೆ ನಾನೊಂದೆನೊ
ಬಿಡದೆ ನಿನ್ನಯ ಧ್ಯಾನವೆಂದೆಂಬ
ಹಡಗ ಏರಿಸು ಎಂದೆನೊ
ಧ್ರಡದಿ ನಿನ್ನಯ ಪಾದ ಸೇರಿಸೊ
ಒಡೆಯ ಪುರಂದರ ವಿಠ್ಠಲಾ.....
||ಸಂದಿತಯ್ಯಾ||
(ಉಪಯುಕ್ತ ನ್ಯೂಸ್)
ಕಾಮೆಂಟ್ ಪೋಸ್ಟ್ ಮಾಡಿ