ಶ್ರೀ ದುರ್ಗೆ ಜಗದಂಬೆ ಒಲಿದು ಬಾರಮ್ಮಾ
ಅಗಲ್ಪಾಡಿಯಲಿ ನೆಲೆಸಿ ಹರಸುತಿಹೆಯಮ್ಮ||ಪ||
ಹಸಿರು ಪರಿಸರವಿತ್ತ ಗುಡ್ಡ ಬೆಟ್ಟವು ಸುತ್ತ
ತಾಯಿ ಹರಿಸಲು ಚಿತ್ತ,ಭವ್ಯ ದೇಗುಲವಾಯ್ತು
ನೆಲೆಯಾದೆ ನೀನಮ್ಮ ಅಗಲ್ಪಾಡಿಯಲ್ಲಿ||
ಪ್ರತಿ ದಿನವು ತ್ರಿ ಕಾಲ ಪೂಜೆಗಳು ನಡೆದು
ಸಂಪ್ರೀತಿಯಲಿ ನೀನು ಭಕುತರನು ಪೊರೆದು
ಕಾಯುತಿಹೆ ನೀನಮ್ಮ ಕರುಣೆಯನು ತಳೆದು||
ಮಾಘ ಶುದ್ಧ ಪಂಚಮಿಗೆ ವೈಭವದಾರಂಭ
ಪಂಚ ದಿನದುತ್ಸವವ ಪಡೆವೆ ಜಗದಂಬಾ
ಹುಣ್ಣಿಮೆಗೆ ನಡೆಯುವುದು ಚಂಡಿಕಾ ಹವನ||
ಪಾಯಸವು ಪ್ರಿಯವಮ್ಮ ದುರ್ಗಾಂಬ ನಿನಗೆ
ಜಟಾಧಾರಿ ದೈವ ನೆಲೆ ಈ ಕ್ಷೇತ್ರದೊಳಗೆ
ನೇಮೋತ್ಸವವಿಹುದು ಉತ್ಸವದ ಕೊನೆಗೆ||
ಸಿಂಹವಾಹಿನಿ ತಾಯಿ ಅಭಯವನು ನೀಡು
ಪರಶಿವನ ಮನದನ್ನೆ ವರನೀಡು ನಮಗೆ
ಶ್ರೀ ದುರ್ಗೆ, ಲಲಿತಾಂಬೆ ಮಣಿದಿರುವೆ ನಿನಗೆ||
ರಚನೆ: ಪೆರ್ಮುಖ ಸುಬ್ರಹ್ಮಣ್ಯ ಭಟ್
ಗಾಯನ: ಭಾಗ್ಯ ಎಸ್ ಭಟ್, ಪಡ್ಪು
ಕಾಮೆಂಟ್ ಪೋಸ್ಟ್ ಮಾಡಿ