ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಅಗಲ್ಪಾಡಿ ದುರ್ಗಾ ಮಾತೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad
ಶ್ರೀ ದುರ್ಗೆ ಜಗದಂಬೆ ಒಲಿದು ಬಾರಮ್ಮಾ

ಅಗಲ್ಪಾಡಿಯಲಿ ನೆಲೆಸಿ ಹರಸುತಿಹೆಯಮ್ಮ||ಪ||


ಹಸಿರು ಪರಿಸರವಿತ್ತ ಗುಡ್ಡ ಬೆಟ್ಟವು ಸುತ್ತ

ತಾಯಿ ಹರಿಸಲು ಚಿತ್ತ,ಭವ್ಯ ದೇಗುಲವಾಯ್ತು

ನೆಲೆಯಾದೆ ನೀನಮ್ಮ ಅಗಲ್ಪಾಡಿಯಲ್ಲಿ||


ಪ್ರತಿ ದಿನವು ತ್ರಿ ಕಾಲ ಪೂಜೆಗಳು ನಡೆದು

ಸಂಪ್ರೀತಿಯಲಿ ನೀನು ಭಕುತರನು ಪೊರೆದು

ಕಾಯುತಿಹೆ ನೀನಮ್ಮ ಕರುಣೆಯನು ತಳೆದು||


ಮಾಘ ಶುದ್ಧ ಪಂಚಮಿಗೆ ವೈಭವದಾರಂಭ

ಪಂಚ ದಿನದುತ್ಸವವ ಪಡೆವೆ ಜಗದಂಬಾ

ಹುಣ್ಣಿಮೆಗೆ ನಡೆಯುವುದು ಚಂಡಿಕಾ ಹವನ||


ಪಾಯಸವು ಪ್ರಿಯವಮ್ಮ ದುರ್ಗಾಂಬ ನಿನಗೆ

ಜಟಾಧಾರಿ ದೈವ ನೆಲೆ ಈ ಕ್ಷೇತ್ರದೊಳಗೆ

ನೇಮೋತ್ಸವವಿಹುದು ಉತ್ಸವದ ಕೊನೆಗೆ||


ಸಿಂಹವಾಹಿನಿ ತಾಯಿ ಅಭಯವನು ನೀಡು

ಪರಶಿವನ ಮನದನ್ನೆ ವರನೀಡು ನಮಗೆ

ಶ್ರೀ ದುರ್ಗೆ, ಲಲಿತಾಂಬೆ ಮಣಿದಿರುವೆ  ನಿನಗೆ||


ರಚನೆ: ಪೆರ್ಮುಖ ಸುಬ್ರಹ್ಮಣ್ಯ ಭಟ್

ಗಾಯನ: ಭಾಗ್ಯ ಎಸ್ ಭಟ್‌, ಪಡ್ಪುsrc="https://pagead2.googlesyndication.com/pagead/js/adsbygoogle.js">

Post a Comment

أحدث أقدم