ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ರಥಸಪ್ತಮಿ ಗೀತೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಇಂದು ರಥಸಪ್ತಮಿಯು ಏಳಿರಿ

ಎಂದು ಎಚ್ಚರಿಸಿರಲು ಹಿರಿಯರು

ಬಂದರೆಲ್ಲರು ಕಣ್ಣನುಜ್ಜುತ ಹಾಸಿಗೆಯ ತೊರೆದು l

ವಂದಿಸುತ ದೇವರಿಗೆ ಮುದದಿಂ

ಮುಂದೆ ಮಾಡುವ ಕಾರ್ಯವರಿಯುತ

ಚೆಂದದಿಂದಲಿ ಮಗ್ನರಾದರು ತಮ್ಮ ಕೆಲಸದೊಳು ll


ಸಾರಿಸಲು ಗೋಮಯದಿ ಅಂಗಳ

ನಾರಿಯರು ಮೆಲುವಾಗಿ ಹಾಡುತ

ಪೋರಿಯರು ಅಣಿ ಮಾಡುವರು ಕೆಮ್ಮಣ್ಣು ರಂಗೋಲಿ l

ಮೂರು ಬದಿಯಲಿ ಪದ್ಧತಿಯ ಅನು

ಸಾರವಾಗಿಯೆ ಅಂಚು ಚಿತ್ರಿಸಿ

ಭಾರಿ ತೇರಿಗೆ ಜಾಗ ಬಿಡುವರು ನಟ್ಟ ನಡುವಲ್ಲಿ ll


ಅಕ್ಕಿ ಹಿಟ್ಟಿಗೆ ಬಣ್ಣ ಬೆರೆಸುತ

ಚುಕ್ಕೆಗಳ ಲೆಕ್ಕಿಸುತಲಿಕ್ಕುತ

ಚೊಕ್ಕವಾಗಿಯೆ ರಥದ ಚಿತ್ರವ ಬಿಡಿಸುವರು ಅವರು l

ಅಕ್ಕ ಪಕ್ಕದ ಜನರು ನೋಡುತ

ಬೆಕ್ಕಸಂ ಬೆರಗಾಗಿ ಪೊಗಳಲು

ಚಿಕ್ಕ ಮಕ್ಕಳ ಹಾಗೆ ಜಂಬದ ನಗೆಯ ಬೀರುವರು ll


ಎಕ್ಕೆದೆಲೆಗಳನಿಟ್ಟು ಮೀಯತ

ತೆಕ್ಕನೆಯೆ ಮಡಿವಸ್ತ್ರ ಧರಿಸಲು

ಜಕ್ಕುಳಿಸುವುದು ಅಯ್ದೆಯರಿಸಿನ ಮೊಗದಲಿಹ ಸೊಬಗು l

ಶರ್ಕರಾನ್ನವ ಮಾಡಿ ದೇಗುಲ

ಹೊಕ್ಕರಣಿ ಬಳಿ ಎಡೆಯನಿಡುತಿರೆ

ಪೆರ್ಕಳಿಸುವುದು ಹಣೆಯಲಿಟ್ಟಿಹ ಕುಂಕುಮದ ಬೆಡಗು ll


ನಲಿವ ಜಗ ವೀಕ್ಷಿಸಲು ಮೂಡಣ

ಲಲನೆ ಬಾನಂಚಿನಲಿ ಇಣುಕಲು

ಬೆಳಕು ಹರಿಯುವ ಮೊದಲೆ ಕಂಡಳು  ಪುರಜನರ ಹುರುಪು l

ಚೆಲುವೆಯರ ತೇಜಸ್ಸು ವರ್ಧಿಪ

ಬಿಳಿಯ ಹಣೆ ನಡುವಲ್ಲಿ ಕಂಡಳು

ಹೊಳೆವ ಸೂರ್ಯನ ತೆರದಿ ಕಾಣುವ  ಕುಂಕುಮದ ಸೊಂಪು ll


ನೋಡುತಲೆ ಮುತ್ತೈದೆ ಹಣೆಯಲಿ 

ತೀಡಿ ತಿದ್ದಿದ ಕೆಂಪು ಕುಂಕುಮ

ಮೂಡ ಹೆಣ್ಣಿಗೆ ಲಜ್ಜೆಯಾಗಲು ಬರಿಯ ಹಣೆ ನೆನೆದು l

ಗಾಢಗೆಂಪಿನ ಬಾಲ ರವಿಯನೆ

ಸೂಡಿಕೊಂಡಿರುವಂತೆ ಕಂಡಿದೆ

ನಾಡು ನಲಿದಿದೆ ಇಂದು ರಥಸಪ್ತಮಿಯ ತೇರೆಂದು ll


ರಚನೆ:   ವಸುಮತಿ ರಾಮಚಂದ್ರ. ಬೆಂಗಳೂರು

ರಾಗ. ಸಂಗೀತ. ಗಾಯನ. ಕಲಾಶ್ರೀ ವಿದ್ಯಾಶಂಕರ್ ಮಂಡ್ಯ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

أحدث أقدم