ಇದು ಗೋಕರ್ಣದ ಪುರಾಣಕಥನ...
ಇದು ಗೋಕರ್ಣದ ಪುರಾಣಕಥನ ಆಲಿಸೆ ಜೀವನ ಪಾವನ
ಮಹಾಬಲೇಶ್ವರ ನೆಲೆಸಿದ ನಾಡಿನ ಅಪೂರ್ವ ಚರಿತೆಯು ಅಮೃತಸಮಾನ
ಇದು ಗೋಕರ್ಣದ ಪುರಾಣಕಥನ ಆಲಿಸೆ ಜೀವನ ಪಾವನ
ರಾವಣೇಶ್ವರನು ಮಾತೆಯ ಪೂಜೆಗೆ ಆತ್ಮಲಿಂಗವನು ತರಲೆಂದು
ರಾವಣೇಶ್ವರನು ಮಾತೆಯ ಪೂಜೆಗೆ ಆತ್ಮಲಿಂಗವನು ತರಲೆಂದು
ಕೈಲಾಸದಡಿಯಲಿ ಕುಳಿತು ಪ್ರಾರ್ಥಿಸಿದ ಪರಮದಯಾಳು ಪರೇಶನ
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಂ
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಮ್
ಸಕಲವೇದವಿದ ಭಕ್ತಾಗ್ರೇಸರ ರಾವಣನುತಿಸಿದ ಶಿವನನ್ನು
ಭಕ್ತರ ಭಕ್ತನು ಸರ್ವ ಶಕ್ತನಾ ಪರಶಿವನೊಲಿದನು ಕ್ಷಣದಲ್ಲಿ
ಲೋಕೈಕನಾಥ ಉದಾತ್ತಚರಿತನು ನೀಡಿದ ವರವನು ರಾವಣಗೆ
ಆತ್ಮಲಿಂಗವನೇ ಬೇಡಿದ ಭಕ್ತನ ಕೋರಿಕೆ ಸಲಿಸಿದ ಮುದದಿಂದ
ಪ್ರಳಯವೇ ಘಟಿಸುವುದೆನ್ನುತ ಭಯದಲಿ ಸುರಕುಲ ತತ್ತರಗೊಳ್ಳುತಿರೆ
ನಾರದ ನೀಡಿದ ಸಲಹೆಯ ಕೇಳಿ ಗಣಪತಿ ಓಡಿದ ಭೂತಳಕೆ
ಸಂಜೆ ಸಮೀಪಿಸೆ ಅರ್ಘ್ಯ ನೀಡಲು ರಾವಣ ಕಾತರಗೊಂಡಿರಲು
ಲಿಂಗವ ಧರೆಯಲಿ ಇರಿಸದಂತಹ ಧರ್ಮ ಸಂಕಟವು ಕಾಡಿರಲು
ಸಮಯಕೆ ಒದಗಿದ ಬ್ರಹ್ಮಚಾರಿ ಆ ಗಣಪತಿ ರಾವಣನೆದುರಲ್ಲಿ
ಅಯ್ಯಾ ವಟುವೇ ಈ ಲಿಂಗವ ಹಿಡಿದಿರು ಎನ್ನುತ ಬೇಡಿದ ರಾವಣನು
ಮೂರು ಸಾರಿ ತಾ ಕರೆಯುವುದೆಂದು ಬರದಿರೆ ಲಿಂಗವು ಧರೆಪಾಲೆಂದು
ಗಣಪತಿ ಅರುಹಿದ ಕಟ್ಟಳೆಯ ರಾವಣ ತೂಗಿದ ತಲೆಯ
ಓಂ ಭೂರ್ಭುವಸ್ಸುವಃ ಓಂ ತತ್ಸವಿತುರ್ವರೇಣ್ಯಂ
ರಾವಣಾಽಽಽ
ಭರ್ಗೋದೇವಸ್ಯ ಧೀಮಹಿ ಧಿಯೋಯೋನಃ ಪ್ರಚೋದಯಾತ್
ರಾವಣಾಽಽಽ
ಓಂ ಭೂರ್ಭುವಸ್ಸುವಃ ಓಂ ತತ್ಸವಿತುರ್ವರೇಣ್ಯಂ
ರಾವಣಾಽಽಽ
ಭರ್ಗೋದೇವಸ್ಯ ಧೀಮಹಿ ಧಿಯೋಯೋನಃ ಪ್ರಚೋದಯಾತ್
ಅರ್ಘ್ಯವ ಕೊಡುತಿಹ ಸಮಯವ ನೋಡಿ ಗಣಪತಿ ಕರೆದನು ರಾವಣನ
ಬರಲಾಗದೆ ರಾವಣ ಮಿಡುಕಿದನು
ಲಿಂಗವು ಧರೆಯನು ಸೇರಿತು
ಓಡಿ ಬಂದು ವಟು ಮಾಡಿದ ಕಾರ್ಯಕೆ ರೋಷಾವೇಷದಿ ಕುಟ್ಟಿದನು
ರಾವಣೇಶ್ವರನು ಗಣಪತಿ ಶಿರವನು ಮುಷ್ಟಿಯಿಂದ ತಾ ಗುದ್ದಿದನು
ಗಣಪತಿ ಮಾಡಿದ ಘನಕಾರ್ಯವನು ಲೋಕವೆಲ್ಲ ಕೊಂಡಾಡಿತು
ದೇವಲೋಕವೇ ಹೂಮಳೆಗರೆಯಿತು ಹರುಷದ ಹೊನಲೇ ಹರಿಯಿತು
ಭಗ್ನಮನೋರಥನಾಗಿ ರಾವಣನು ಭೂಗತ ಲಿಂಗವನೆತ್ತುತಿರೆ
ಸೋತು ಬಿಸುಟನು ದೆಸೆದೆಸೆಯಲ್ಲಿ ವಸ್ತ್ರ ಸಂಪುಟವದಾರವನು
ಉದ್ಭವಿಸಿತು ಒಡನೊಡನೆಯೆ ಅಲ್ಲಿ ಅದ್ಭುತ ಲಿಂಗಗಳೈದು
ಸೆಜ್ಜೇಶ್ವರ ಗುಣವಂತೇಶ್ವರ ಮುರುಡೇಶ್ವರ ಧಾರೇಶ್ವರ ಮಹಾಬಲೇಶ್ವರ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق