ಬಾನೊಡೆಯ ಮೂಡುತಿರಲು
ಬೆಳಕಾಗಿ ಹರಡುತಿರಲು
ಆಹಾ ಭುವಿಯಲ್ಲಿ ಅದೇನು ರಮ್ಯವೊ
ಉದಯಗೀತೆ ಹಾಡುತಿರಲು
ಬದುಕಗೀತೆ ಹೊಳೆಯುತಿರಲು
ಆಹಾ ಭುವಿಯಲ್ಲಿ ಅದೇನು ಭವ್ಯವೊ
ರವಿಮೂಡಿ ಬೆಳಕಾಗಿ
ಉದಯಗೀತೆ ಬಾಳಗೀತೆ ಆಗಲು
ಆಹಾ ನೇಸರಲಿ ಅದೇನು ದಿವ್ಯವೊ
ಮುಂಜಾನೆ ಮಂಜಿನ ಹನಿ
ಇಬ್ಬನಿಯ ಮುತ್ತಾಗಿ ಹೊಳೆಯಲು
ಆಹಾ ನೋಡಲೆಂತ ಸೊಗಸೊ
ಇಂಪಾಗಿ ತಂಗಾಳಿ ಬೀಸಲು
ಹೂವರಳಿ ಪರಿಮಳ ಸೂಸಲು
ಆಹಾ ತನವಲೆಂತ ಆನಂದವೊ
ಬೆಳಗಿನಲಿ ಹಕ್ಕಿಗಳು ಹಾಡಲು
ಚಿಲಿಪಿಲಿ ಭಾವಗೀತೆ ಕೇಳಲು
ಆಹಾ ಮನದಲೆಂತ ಹರ್ಷವೊ
ರಚನೆ: ಬಂದ್ರಳ್ಳಿ ಚಂದ್ರು
ಗಾಯನ: ಶ್ರೀಮತಿ ವಿದ್ಯಾ ಪಿ. ಭಟ್
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ