ಆಲಿಸಿ: ಮುಕ್ತಕ ಗಾಯನ- ಜೋಗುಳದ ಹಾಡಂತೆ
ರಚನೆ: ಗುಣಾಜೆ ರಾಮಚಂದ್ರ ಭಟ್
ಗಾಯನ: ವಸಂತ ಬಾರಡ್ಕ
ಮುಕ್ತಕಗಳು
********
ಜೋಗುಳದ ಹಾಡಂತೆ ಮಳೆ ಧಾರೆ ಸುರಿಯುತ್ತ
ತೂಗುತಿವೆ ತೊಟ್ಟಿಲನು ಸುಖ ನಿದ್ದೆಗೆ
ಕೂಗುತಿವೆ ಮಂಡೂಕ ಹೊಲದಲ್ಲಿ ಗುಂಪಾಗಿ
ರಾಗದಲಿ ಮೇಳಯಿಸಿ -ರಾಮಚಂದ್ರ.
*******
ಮಳೆಗಾಲ ಬಂದಾಗ ಬೋಳಾದ ಬಯಲಲ್ಲಿ
ಕಳೆ ತುಂಬಲೆನ್ನುತ್ತ ತೃಣ ಚಿಗುರಿವೆ
ಬೆಳೆಯನ್ನು ಕೊಡಲೆಂದು ತೆಂಗಡಕೆ ತೂಗುತ್ತ
ನೆಲಕೆಲ್ಲ ಶೃಂಗಾರ -ರಾಮಚಂದ್ರ.
-ಗುಣಾಜೆ ರಾಮಚಂದ್ರ ಭಟ್
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ