ಯುವ ಬರಹಗಾರ, ಕವಿ ಪ್ರದೀಪ ಶೆಟ್ಟಿ ಬೇಳೂರು ಸಾಹಿತ್ಯವಿರುವ ಹಾಗೂ ಪ್ರಸನ್ನ ಭೋಜಶೆಟ್ಟರ್ ಅವರು ಸಂಗೀತ ಮತ್ತು ದನಿ ನೀಡಿರುವ ಹೆತ್ತವ್ವ ಕೇಳವ್ವ ಹಾಡು ದೃಷ್ಟಿ ಕ್ರಿಯೇಷನ್ಸ್ ಯೂ ಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಆಗಿದೆ. ಸಾಹಿತ್ಯ, ಸಂಗೀತ, ಗಾಯನ , ಚಿತ್ರೀಕರಣ ಎಲ್ಲವೂ ಸುಂದರವಾಗಿ ಮೂಡಿಬಂದಿದೆ.
Title : ಹೆತ್ತವ್ವ ಕೇಳವ್ವ
Lyrics: Pradeep Shetty Beloor
Singer and Music Composer: Prasanna Bhojashettar
Production: Parijata films
Presented By : Drusti Creations
Supported by: Ravindra Shetty Tantradi
Akshay Shetty Siddapura
LYRICS:
ಹೆತ್ತವ್ವ ಕೇಳವ್ವ ಈ ಕಂದನ ಕೂಗನ್ನ
ಅರಸುತ್ತ ಇರುವೆನು ನಿನ್ನಯ ತೋಳನ್ನ
ಆ ನಿನ್ನ ಸೆರಗಲ್ಲಿ ಮರೆಯಾಗುವ ಆಸೆಯು
ನಿನ್ನ ಮಡಿಲಲ್ಲಿ ಮಲಗಿ ಮಗುವಾಗುವ ಆಸೆಯು
ನೀನಿರದೆ ನನಗೆ ಈ ಜಗವೇ ಶೂನ್ಯವು
ಹೆತ್ತವ್ವ ಕೇಳವ್ವ ಈ ಕಂದನ ಕೂಗನ್ನ sssss
ಅರಸುತ್ತಾ ಇರುವೆನು ನಿನ್ನಯ ತೋಳನ್ನ
ಈ ಒಲವಿನ ಕೂಸನು, ನವಮಾಸ ಸಹಿಸಿದಳು...
ನಾ ವಿವರಿಸಲಾರೆನು ಅವಳೆದೆಯ ಪ್ರೇಮವನು...
ಅಕ್ಕರೆಯ ಕೈತುತ್ತ ತಿನಿಸಿ, ಹಸಿವಿನಲಿ ಬೆಂದವಳು…
ನಾ ತೀರಿಸಲಾರೆನು ಈ ಜನುಮದಿ ಋಣವನು
ನೋವಿನ ಸಾಗರದಿ ಈಜಿದ ಮಹಾ ತಾಯಿಯು,
ನಾ ಕಂಡ ಜಗದೇಕ ಸಹನಾ ಮೂರ್ತಿಯು....
ಹೆತ್ತವ್ವ ಕೇಳವ್ವ ಈ ಕಂದನ ಕೂಗನ್ನ
ಅರಸುತ್ತ ಇರುವೆನು ನಿನ್ನಯ ತೋಳನ್ನ
ನಾ ಅತ್ತಾಗs, ಮನದಲ್ಲೇ ಮರುಗಿದಳು
ನಾ ನಕ್ಕಾಗ ಜಗವೆಲ್ಲ ಸಾರಿದಳು.
ನಾ ಕಂಡ ಕನಸಿಗೆ ನೀರೆರೆದು ಪೋಷಿಸಿ,
ಸೋತಾಗ ಕೈಹಿಡಿದು, ಮಾತಲ್ಲೇ ಹುರಿದುಂಬಿಸಿ,
ಜೋಗುಳವ ಹಾಡುತಾs , ಮುನಿಸಿನಲೇ ಮುದ್ದಿಸಿ,
ಕರುಣೆಯ ತೊಟ್ಟಿಲಲಿ, ನನ್ನನಿಟ್ಟು ತೂಗಿದಳು...
ಹೆತ್ತವ್ವ ಕೇಳವ್ವ ಈ ಕಂದನ ಕೂಗನ್ನ
ಅರಸುತ್ತಾ ಇರುವೆನು ನಿನ್ನಯ ತೋಳನ್ನ...
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق