ಶ್ರೀಹರಿಯು ಬಾಗಿಲನ್ನು ತೆರೆ ಎಂದು ಹೇಳಿದಾಗ ಲಕ್ಷ್ಮೀದೇವಿಯು ನಿನ್ನ ಹೆಸರು, ಪರಿಚಯವನ್ನು ಹೇಳಿದರೆ ಮಾತ್ರ ಬಾಗಿಲು ತೆರೆಯುತ್ತೇನೆ ಎನ್ನುತ್ತಾಳೆ. ಆಗ ಶ್ರೀಹರಿಯು ತನ್ನ ದಶಾವತಾರಗಳ ಬಗೆಗೆ ಹೇಳುತ್ತಾನೆ. ಲಕ್ಷ್ಮೀದೇವಿಯು ಅದ್ಯಾವುದೂ ತನಗೆ ತಿಳಿಯದು ಎಂಬಂತೆ ಮೂದಲಿಸಿ, ಹೊರಟು ಹೋಗು ಎನ್ನುತ್ತಾಳೆ. ಕೊನೆಗೆ ತಾನೆ ಮೋಹನ ವಿಠಲ ಎಂದು ಹೇಳಿದಾಗ ಕದವನ್ನು ತೆರೆದು, ತನ್ನ ಅಪರಾಧವನ್ನು ಕ್ಷಮಿಸು ಎಂದು ಪಾದಕ್ಕೆ ಎರಗುತ್ತಾಳೆ. ದೇವ ದಂಪತಿಗಳ ಸರಸ, ಸವಿ ಮುನಿಸು, ವಿನೋದಗಳನ್ನು ಸ್ವಾರಸ್ಯಪೂರ್ಣವಾಗಿ ಈ ಹಾಡಿನಲ್ಲಿ ಚಿತ್ರಿಸಲಾಗಿದೆ.
ಪುತ್ತೂರಿನ ಸುದಾನ ಶಾಲೆಯಲ್ಲಿ ಇನ್ನೀಗ ಆರನೇ ತರಗತಿಗೆ ಪಾದಾರ್ಪಣೆ ಮಾಡಲಿರುವ ಅಕ್ಷರ ಕೆ ಸಿ ಈ ಹಾಡನ್ನು ಹಾಡುವ ಪ್ರಯತ್ನವನ್ನು ಮಾಡಿದ್ದಾಳೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق