ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆಯ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ಮಾನವನ ಅತಿಯಾದ ಕೈಗಾರೀಕರಣ, ಅತಿಯಾದ ಯಾಂತ್ರಿಕ ನಾಗರೀಕತೆಯ ಪರಿಣಾಮ ಅದಾಗಲೇ ನಮ್ಮ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಅತಿಯಾದ ವಾಯು ಮಾಲಿನ್ಯ, ಅಲ್ಲದೇ ಓಝೋನ್ ಪದರ, ಹಾನಿಗೊಳಗಾಗುತ್ತಿದೆ. ಪರಿಸ್ಥಿತಿ ಹೀಗೆಯೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಹಳ ಕಷ್ಟ. ಅತಿಯಾದ ನಗರೀಕರಣದ ಪರಿಣಾಮ ಕೃಷಿಗೆ ಸರಿಯಾದ ಪ್ರೋತ್ಸಾಹ ಇಲ್ಲದೇ ಆಹಾರ ಧಾನ್ಯಗಳ ಹಾಗೂ ತರಕಾರಿಗಳ ಹಣ್ಣು ಹಂಪಲಗಳ ಬೆಲೆ ಏರಿಕೆ ನಮ್ಮ ದೈನಂದಿನ ಸಾಮಾಜಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಹಾಗೂ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ.
ಕೆಟ್ಟ ಅಧಿಕಾರ ದಾಹ, ರಾಜಕೀಯ ವ್ಯವಸ್ಥೆ ತಮ್ಮ ಅಧಿಕಾರ ವಹಿಸಿಕೊಂಡ ದಿನದಿಂದ ಲೂಟಿ ಮಾಡುವ ಕುರಿತು ಯೋಚನೆ ಇತ್ತೀಚೆಗೆ ಹನಿ ಟ್ರ್ಯಾಪ್ ಬೇರೆ. ಇಂತಹ ದೂರದೃಷ್ಟಿ ಇಲ್ಲದ ರಾಜಕಾರಣಿಗಳ ದುರಾಸೆಗೆ ಇಡೀ ನಾಗರೀಕ ಸಮಾಜವಷ್ಟೇ ಅಲ್ಲ ಪರಿಸರವೂ ಬೆಲೆ ತೆರಬೇಕಾದ ಪರಿಸ್ಥಿತಿ. ಇವನ್ನೆಲ್ಲ ಅತ್ಯಂತ ಪರಿಣಾಮಕಾರಿಯಾಗಿ ಚಂದ್ರಹಾಸ್ ಕೋಟೆಕಾರ್ ಬರೆದಿದ್ದಾರೆ. ಅವರ ಸಾಹಿತ್ಯಕ್ಕೆ ಸಂಗೀತ ನಿರ್ದೇಶನ ಮಾಡಿ ಹಾಡಿದ್ದಾರೆ ಸಂಗೀತ ಧಾಮ ಯೂಟ್ಯೂಬ್ ವಾಹಿನಿಯ ಮೃತ್ಯುಂಜಯ ದೊಡವಾಡ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق