ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಹಾವಾಡಿಗರಲ್ಲ‌ ಇವರು ...; ಪೇಜಾವರ ಶ್ರೀಗಳು..! ನೋಡಿ ಈ ವೀಡಿಯೋ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ಉಡುಪಿಯ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಬಹುಮುಖಿ ಹವ್ಯಾಸ ಆಸಕ್ತಿಗಳು, ಪ್ರಕೃತಿಯ ಇತರೆ ಜೀವರಾಶಿಗಳೊಂದಿಗೆ ಪ್ರೀತಿ ಅನ್ಯೋನ್ಯತೆಯಿಂದ ವರ್ತಿಸಿ ಆರೈಕೆ ಮಾಡುವ ಅವರ ಸಹೃದಯತೆಗಳ ಬಗೆಗೆ ಅನೇಕ ಬಾರಿ ಇಲ್ಲಿ ಹಂಚಿಕೊಂಡಿದ್ದೇನೆ.

ಇದು ಶ್ರೀಗಳವರ ಅಂಥದ್ದೇ ಮತ್ತೊಂದು ಸಾಹಸ ಹಾಗೂ ಸಾಮಾನ್ಯರು ಅಬ್ಬಾ...!!! ಎಂದು ಹುಬ್ಬೇರಿಸುವ ಘಟನೆ.

ನೀಲಾವರ ಗೋಶಾಲೆಯ ಆವರಣದಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಆಕಸ್ಮಿಕವಾಗಿ ಕಂಡುಬಂದ ಹೆಬ್ಬಾವಿನ ‌ಮರಿಯೊಂದನ್ನು ಅತ್ಯಂತ ಸುಲಭ ಹಾಗೂ ಸರಳವಾಗಿ ಆ ಹಾವಿಗೆ ಯಾವುದೇ ಅಪಾಯವಿಲ್ಲದೇ ಹಿಡಿದ ಶ್ರೀಗಳ ಸಾಹಸವನ್ನು ಅವರ ಶಿಷ್ಯರು ಸಹಜ ಕುತೂಹಲದಿಂದ ಕಂಡು ಅಚ್ಚರಿಪಟ್ಟರು. ಅದನ್ನು ಪ್ರಾತ್ಯಕ್ಷಿಕೆಯ ರೂಪದಲ್ಲಿ ದಾಖಲಿಸಿ ಹಾವೆಂದರೆ ಅಬ್ಬರಿಸುವ ಭಯಪಡುವ ಸಾಮಾನ್ಯರೂ ಅದನ್ನು ಸುಲಭವಾಗಿ ಹಿಡಿಯುವ ಉಪಕ್ರಮವನ್ನು ಶ್ರೀಗಳವರೇ ವಿವರಿಸಿ ಉಪಕರಿಸಿದ್ದಾರೆ‌.


ಒಂದೊಮ್ಮೆ ಕಳೆದ ಆರೇಳು‌ ವರ್ಷಗಳ ಹಿಂದೆ ಇದೇ‌ ನೀಲಾವರ ಗೋಶಾಲೆಯ ಆವರಣದಲ್ಲಿ ಚಿರತೆಯೊಂದು ಸಂಚರಿಸುತ್ತಾ ಗೋವೊಂದನ್ನು ಎಳೆದೊಯ್ದಾಗ ಅದರಿಂದ ತೀವ್ರ ನೊಂದ ಶ್ರೀಗಳು ಸ್ವತಃ ಕೆಲವು ರಾತ್ರಿಗಳಲ್ಲಿ ಒಬ್ಬರೇ ಇಡೀ ಗೋಶಾಲೆಯ ಸುಮಾರು 32 ಎಕ್ರೆ ಕಾಡು ಪ್ರದೇಶದಲ್ಲಿ ಸಂಚರಿಸುತ್ತಾ ಚಿರತೆಯ ಚಲನವಲನಗಳನ್ನು ಕುತೂಹಲದಿಂದ ಗಮನಿಸಿಕೊಂಡು, ಕೊನೆಗೊಂದು ರಾತ್ರಿ ತಾನೇ ಬಲೆಬೀಸಿ ಚಿರತೆಯನ್ನು ಹಿಡಿದೇ ಬಿಟ್ಟಿದ್ದರು. ಮರುದಿನ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬಂದಿ ಬಂದು ಚಿರತೆಯನ್ನು ದೂರದ ಅಭಯಾರಣ್ಯಕ್ಕೆ ಬಿಟ್ಟು ಬಂದರು.

ಈ ರೀತಿಯಾಗಿ ಶ್ರೀಗಳವರ ಸಾಹಸ ಮನೋವೃತ್ತಿ ಪ್ರವೃತ್ತಿಗಳ ಸಾಲು ಸಾಲು ವೃತ್ತಾಂತಗಳೇ ಇರುವುದು ಅವರ ಬಗೆಗೆ ಅಭಿಮಾನವನ್ನು ನೂರ್ಮಡಿಸುತ್ತದೆ.

- ಜಿ ವಾಸುದೇವ ಭಟ್ ಪೆರಂಪಳ್ಳಿ




Tags: Pejavara Swamiji, Sri vishwaprasanna Teertha Swamiji, Catching the snake, Snake catcher, ಹಾವು ಹಿಡಿಯುವುದು ಹೇಗೆ, ಪೇಜಾವರ ಶ್ರೀ, ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ 

Post a Comment

أحدث أقدم