ಹಲಸಿನ ಹಣ್ಣಿನ ಸೊಳೆಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ ಕುಕ್ಕರ್‌ನಲ್ಲಿ ಇಟ್ಟು ಬೇಯಿಸಿಕೊಳ್ಳಿ. ಕುಕ್ಕರ್‌ನಲ್ಲಿ ಒಂದು ವಿಸಿಲ್ ಹೊಡೆಸಿದರೆ ಸಾಕು.
ನಂತರ ಒಂದು ಕಡಾಯಿಗೆ ಅದನ್ನು ವರ್ಗಾಯಿಸಿಕೊಳ್ಳಿ. ಅದನ್ನು ಚೆನ್ನಾಗಿ ಸೌಟಿನಲ್ಲಿ ಕಲಕುತ್ತಾ ಇರಿ. ಹಿಟ್ಟಿನ ರೂಪಕ್ಕೆ ಬಂದ ಹಲಸಿನ ಹಣ್ಣು ಕಡಾಯಿಗೆ ತಳಹತ್ತದಂತೆ ನೋಡಿಕೊಳ್ಳಿ. ಹಣ್ಣಿನ ಜಾಮ್ ಕಂದು ಕಡು ಬಣ್ಣಕ್ಕೆ ಬರುವವರೆಗೂ ಕಾಯಿಸುತ್ತಾ ಇರಿ. ಹದಪಾಕ ಬರುವ ವರೆಗೂ ಕಾಯಿಸುತ್ತಾ ಇರಿ. ಹೆಚ್ಚು ಹೊತ್ತು ಕಾಯಿಸಿದಷ್ಟೂ ಪಾಕ ಗಟ್ಟಿಯಾಗಬಹುದು. ಚಾಕಲೇಟ್‌ನಂತೆ ಗಟ್ಟಿಯಾದಷ್ಟೂ ಬಾಳಿಕೆ ಹೆಚ್ಚು ಬರುತ್ತದೆ.
إرسال تعليق