ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಬಂಗಾಳ ರಾಜಕೀಯ: ಆಡಳಿತ ನಿಯಮದ ಶಿಷ್ಟಾಚಾರ ಮುರಿದ ಮಮತಾ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ರಾಜಕೀಯ ಆಡಳಿತ ಮತ್ತು ನಾಗರಿಕ ಸೇವಾ ಆಡಳಿತದಲ್ಲಿ ಕೆಲವೊಂದು ಶಿಷ್ಟಾಚಾರ (protocol) ಅನ್ನುವ ತತ್ವದ ನಿಯಾಮವಳಿಗಳನ್ನು ಆಡಳಿತದಲ್ಲಿ ಅಳವಡಿಸಿ ಕೊಂಡಿರುತ್ತೇವೆ. ಇದರ ಮುಖ್ಯ ಉದ್ದೇಶವೇ ಆಡಳಿತ ವ್ಯವಸ್ಥೆಯನ್ನು ಶ್ರೇಣಿ ಕೃತವಾಗಿ vertical ವಿನ್ಯಾಸದಲ್ಲಿ ರಚಿಸಲಾಗಿದೆ. ಅಧಿಕಾರ ಸ್ಥಾನ ಮಾನ ಕೆಲಸ ನಿವ೯ಣೆ ಇತ್ಯಾದಿಗಳು ಸುಗಮವಾಗಿ ಸಾಗಬೇಕು ಅನ್ನುವ ಮುಖ್ಯ ಉದ್ದೇಶದಿಂದಲೇ ಇದನ್ನು ಪ್ರತಿಯೊಂದು ಸಂಘ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗಿದೆ. ಇದರಿಂದಾಗಿ ಆಡಳಿತ ಸುವ್ಯವಸ್ಥಿತವಾಗಿ ನಡೆಯಲು ಸಾಧ್ಯ ಇಲ್ಲವಾದರೆ ಸಂಘಷ೯ಕ್ಕೆ ಇದು ಎಡೆಮಾಡಿಕೊಡುತ್ತದೆ ಅನ್ನುವುದೇ ಇದರ ತಾತ್ಪರ್ಯ.

ಇದಕ್ಕೊಂದು ಜೀವಂತ ಉದಾಹರಣೆ ಎಂಬಂತೆ  ಪ.ಬಂಗಾಳದಲ್ಲಿ ದೇಶದ ಪ್ರಧಾನಮಂತ್ರಿಗಳು ನೆರೆ ಸಮೀಕ್ಷೆ ನಡೆಸಿ ಪರಿಹಾರ ಘೇೂಷಿಸುವ ಸಲುವಾಗಿ ಅಧಿಕೃತವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಪ.ಬಂಗಾಳದ ಮುಖ್ಯಮಂತ್ರಿಗಳು ಪ್ರಧಾನಿಗಳನ್ನು ಖುದ್ದಾಗಿ ಎದುರು ನಿಂತು ಸ್ವಾಗತಿಸಬೇಕಾದ ಮಮತಾ ಬ್ಯಾನರ್ಜಿ ಪ್ರಧಾನಿಗಳನ್ನು ಕಾಯಿಸಿದ್ದು ಮಾತ್ರವಲ್ಲ ಸಭೆಗೆ ಬಾರದೇ ಹೇೂಗಿರುವುದು ಶಿಷ್ಟಾಚಾರದ ಉಲಂಘನೆ ಮಾತ್ರವಲ್ಲ ಮಮತಾರವರ ಉದ್ದಟತನವೆಂದೇ ಕರೆಯಬೇಕಾಗುತ್ತದೆ. ಒಂದು ವೇಳೆ ಅವರಿಗೆ ಸಕಾರಣವಾಗಿ ಬರಲಿಕ್ಕೆ ಸಾಧ್ಯವಾಗದಿದ್ದ ಸಂದರ್ಭದಲ್ಲಿ  ಹಿರಿಯ ಸಚಿವರನ್ನಾದರೂ ಕಳುಹಿಸುವ ವ್ಯವಸ್ಥೆಯನ್ನು ಮುಖ್ಯಮಂತ್ರಿಗಳೇ ಮಾಡಬೇಕಿತ್ತು. ಈ ಲೇೂಪಕ್ಕೆ ನೇರವಾಗಿ ಆ ರಾಜ್ಯದ ಮುಖ್ಯ ಕಾಯ೯ದಶಿ೯ಗಳು ಕೂಡಾ  ಹೊಣೆಗಾರರಾಗುತ್ತಾರೆ.

ಈ ಶಿಷ್ಟಾಚಾರ ಮುರಿದು ದೇಶದ ಪ್ರಧಾನಿಗಳಿಗೆ ತೇೂರಿದ ಅಗೌರವ ಕಾರಣಕ್ಕಾಗಿ  ಮೊದಲ ಅಸ್ತ್ರವಾಗಿ ಕೇಂದ್ರ ಸರ್ಕಾರ ಬಳಸಿದ ಪ್ರಥಮ ಬಾಣವೇ ಪ.ಬಂಗಾಳದ ಮುಖ್ಯ ಕಾಯ೯ದಶಿ೯ಗಳನ್ನು ತಕ್ಷಣವೇ ಕೇಂದ್ರ ಆಡಳಿತಕ್ಕೆ ವಗಾ೯ವಣೆ ಮಾಡಿ ಆದೇಶ ಹೊರಡಿಸಿದೆ. ಈ ಮುಖ್ಯ ಕಾಯ೯ದಶಿ೯ಗಳು ಕೂಡಾ ಪ್ರಧಾನಿ ಕರೆದ ಸಭೆಗೆ ಬಾರದೆ ಮುಖ್ಯಮಂತ್ರಿಗಳ ಹಿಂದೇ ಬಿದಿದ್ದರು. ಅದಕ್ಕೆ ಹೇಳುವುದು ಇಂತಹ ರಾಜಕೀಯ ತಿಕ್ಕಾಟದಲ್ಲಿ ಕೊನೆಗೆ ಬಲಿಪಶುಗಳಾಗುವುದು ಇಂತಹ ಹಿರಿಯ ಅಧಿಕಾರಿಗಳೇ.

ಕಾನೂನಿನ ಪ್ರಕಾರ ಶಿಷ್ಟಾಚಾರ ಪಾಲಿಸಿಕೊಂಡು ಬರಬೇಕಾದದ್ದು ಅಧಿಕಾರಿಗಳ ಕತ೯ವ್ಯವೂ ಹೌದು. ಈ ರಾಜಕೀಯ ಕಾಯಾ೯ಂಗ ಮಾಡುವ ಯಾವುದೇ ತಪ್ಪಿಗೆ ಕೊನೆಗೂ ಶಿಕ್ಷೆಗೆ ಒಳಗಾಗುವುದು ಈ ನಾಗರಿಕ ಸೇವಾ ವಗ೯ವೇ. ಸರಕಾರದ ಎಲ್ಲಾ ಆದೇಶಗಳು ಪ್ರಕಟಗೊಳ್ಳುವುದು ಇವರ ಹೆಸರಿನಲ್ಲಿಯೇ ಹೊರತು ಮುಖ್ಯಮಂತ್ರಿಗಳ ಹೆಸರಿನಲ್ಲಿ ಅಲ್ಲ.  ಮಂತ್ರಿಗಳು ಇವತ್ತು ಇರುತ್ತಾರೆ ನಾಳೆ ಹೇೂಗುತ್ತಾರೆ ನಾಗರಿಕ ಸೇವಾ ವಗ೯ ಶಾಶ್ವತವಾಗಿ ಕಾಯ೯ ನಿವ೯ಹಿಸ ಬೇಕಾದವರು. ಇದನ್ನು ನಾಗರಿಕ ಸೇವಾ ವಗ೯ ಅಥ೯ಮಾಡಿಕೊಳ್ಳಬೇಕು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಶಿಷ್ಟಾಚಾರ ಮುರಿಯಲು ತನ್ನ ಅಧಿಕಾರಿಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಖಂಡಿತವಾಗಿಯೂ ಇದು ಅಕ್ಷಮ್ಯ ಅಪರಾಧ. ಈ ಹಿಂದೆ ಅಲ್ಲಿನ ರಾಜ್ಯಪಾಲರಿಗೂ ಅವಮಾನಮಾಡಿರುವುದು ರಾಜಕೀಯ ಶೇಡಿನ ಇನ್ನೊಂದು  ಪರಿ. ಇದು ಕೇಂದ್ರ ಮತ್ತು ರಾಜ್ಯ ನಡುವಿನ ಸಂಬಂದಕ್ಕೆ ಇನ್ನಷ್ಟು ಪೆಟ್ಟು ಕೊಡುವ ಸಾಧ್ಯತೆ ಇದೆ. ದೇಶದ  ಏಕತೆ ಭದ್ರತಾ ದೃಷ್ಟಿಯಿಂದ ಕೇಂದ್ರಕ್ಕೆ ಹೆಚ್ಚಿನ ಅಧಿಕಾರವುಾ ಇದೆ. ಇನ್ನೂ ಹಲವು ರೀತಿಯಲ್ಲಿ ಹಠ ಮಾರಿ ಉದ್ದಟತನ ತೇೂರಿದ ಮಮತಾರಿಗೆ ಕೇಂದ್ರ ಸರ್ಕಾರ ಸರಿಯಾದ ರೀತಿಯಲ್ಲಿ ಪಾಠ ಕಲಿಸಲು ಮುಂದಾಗಬಹುದು. ಅಂತೂ ಪ.ಬಂಗಾಳವನ್ನು ಹಿಂದಿನ ಇನ್ನೊಂದು ಜಮ್ಮು ಕಾಶ್ಮೀರವಾಗಲು ಬಿಡಲಾರದು ಬಿಡಬಾರದು. ಒಟ್ಟಿನಲ್ಲಿ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಅನ್ನುವ ಹಾಗೇ ಪ.ಬಂಗಾಳದ ಜನರು ಬಡವಾಗುವುದು ಬೇಸರದ ವಿಚಾರ ಅಷ್ಟೇ.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم