ಕರ್ನಾಟಕ ರಾಜ್ಯದ ಇಂದಿನ ರಾಜಕೀಯ ಪರಿಸ್ಥಿತಿ ನೇೂಡಿದರೆ ಎಂಥವನಿಗೂ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಕಳೆದುಕೊಳ್ಳಲೇ ಬೇಕಾದ ಪರಿಸ್ಥಿತಿ. ಇಡಿ ರಾಜ್ಯದ ಜನರ ಬದುಕೇ ಕೊರೊನದಿಂದ ತತ್ತರಿಸಿ ಹೇೂಗಿದೆ. ಪ್ರತಿ ನಿತ್ಯವೂ ಕೊರೊನದಿಂದ 300 ರಿಂದ 400 ಮಂದಿ ಸಾವನಪ್ಪುತ್ತಿದ್ದಾರೆ. ಇದನ್ನು ಕಂಡು ಹಗಲು ರಾತ್ರಿ ಯನ್ನದೇ ಕೆಲಸ ಮಾಡ ಬೇಕಾದ ಘನ ಸರಕಾರ "ಮಸಣದ ಮನೆಯಲ್ಲೂ ಅಧಿಕಾರಕ್ಕಾಗಿ ಕಚ್ಚಾಟ ಮಾಡುವುದನ್ನು ನೇೂಡಿದರೆ ಯಾಕಪ್ಪ ಇಂತಹ ಪ್ರಜಾಪ್ರಭುತ್ವ ವ್ಯವಸ್ಥೆ ಅನ್ನಿಸದೇ ಇರಲಾರದು. ಈ ಮಸಣದ ಮನೆಯಲ್ಲೂ ಇಂತಹ ಮನ:ಸ್ಥಿತಿಯ ಶಾಸಕರ ಸಚಿವರ ನಡೆಯನ್ನು ಬೆಂಬಲಿಸುವವರು ಇದ್ದಾರೆ ಅಂದ್ರೆ ಮನುಷ್ಯತ್ವದ ಪ್ರಜ್ಞೆ ಇಲ್ಲವೆಂದೇ ಹೇಳಬೇಕು.
ಜನಸಾಮಾನ್ಯ ಮತದಾರರಾದ ನಮಗೆ ಇಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಬೇಕೊ? ಬೇಡವೊ ಅನ್ನುವುದು ಮುಖ್ಯವಲ್ಲ. ಬದಲಾಗಿ ನಮಗಿಂದು ತುರ್ತಾಗಿ ಬೇಕಾಗಿರುವುದು ಜನರ ಜೀವ ಉಳಿಸುವ ಜವಾಬ್ದಾರಿಯುತವಾಗಿ ಕಾರ್ಯನಿವ೯ಹಿಸುವ ಸರಕಾರ. ಈ ಜವಾಬ್ದಾರಿ ನೀವು ಮಾಡುತ್ತೀರಿ ಅಂದು ನಂಬಿ ನಿಮಗೆ ಅಧಿಕಾರ ಕೊಟ್ಟರೇ ನೀವು ಜನರ ಪ್ರಾಣವನ್ನು ಒತ್ತೆ ಇಟ್ಟು ಕೀಳು ರಾಜಕೀಯ ಮಾಡಲು ಕರ್ನಾಟಕವನ್ನು ಒಂದು ವೇದಿಕೆಯನ್ನಾಗಿ ಮಾಡುತ್ತೀದ್ದೀರಿ ಅಂದರೆ ನಿಮ್ಮನ್ನು ಆಯ್ಕೆ ಮಾಡಿದ ನಮ್ಮ ಮನಸ್ಸಿಗೂ ಅತೀವ ನೇೂವಾಗದೇ ಇರುತ್ತದೆಯೇ?. ಬಿಜೆಪಿಯ ರಾಜ್ಯ- ರಾಷ್ಟ್ರ ನಾಯಕರುಗಳಿಗಾದರೂ ಅಥ೯ವಾಗಬೇಕಿತ್ತು. ಕರ್ನಾಟಕದಲ್ಲಿ ಯಾವ ದಾರಿಯಲ್ಲಿ ಅಧಿಕಾರ ಹಿಡಿದಿದ್ದೇವೆ. ಅದನ್ನಾದರೂ ಅರ್ಥಮಾಡಿಕೊಂಡು ಸರಿದಾರಿಯಲ್ಲಿ ಹೇೂಗುವ ಬುದ್ದಿಯನ್ನಾದರೂ ತೇೂರಿಸಬೇಕಿತ್ತು.
ಇಂದಿನ ವಿಷಮ ಪರಿಸ್ಥಿತಿ ಯಲ್ಲಿ ಮುಖ್ಯಮಂತ್ರಿಗಳು ಕೆಲವೊಂದು ಸಚಿವರು ಶಾಸಕರು ಹಗಲಿರುಳು ಶ್ರಮವಹಿಸಿ ಕೆಲಸ ನಿವ೯ಹಿಸುತ್ತೀರ ಬೇಕಾದರೆ ಅಧಿಕಾರ ದಾಹದ ಕೆಲವೊಂದು ಸಚಿವರ ಬಣ ಈ ಮುಖ್ಯಮಂತ್ರಿಗಳನ್ನು ಹೇಗೆ ಬದಲಾಯಿಸಬಹುದೆಂಬ ಕುತಂತ್ರ ರಾಜಕೀಯದಲ್ಲಿ ಹಗಲ ರಾತ್ರಿ ತೊಡಗಿಸಿಕೊಂಡು ಹೆೈಕಮಾಂಡು, ಲೇೂಕಮಾಂಡು, ಮೀಟಿಂಗ್, ಇದರಲ್ಲಿಯೇ ಬಿದ್ದು ಸುದ್ದಿ ಮಾಡುತ್ತಿದ್ದಾರೆ ಅಂದರೆ ಏನು ಹೇಳಬೇಕು ಇವರ ಧೂರ್ತತನಕ್ಕೆ? ಹಾಗಾದರೆ ಈ ಸರಕಾರದಲ್ಲಿ ಮುಖ್ಯಮಂತ್ರಿ ಮಂತ್ರಿಗಳಿಗೆ ಸ್ವಲ್ಪವೂ ಅಧಿಕಾರವಿಲ್ಲವೇ? ಯಾರೇ ಏನೇ ಹೇಳಲಿ ಅಂತಹ ಸಚಿವರಿಗೆ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿ ಮಂತ್ರಿ ಪದವಿಯಿಂದ ಕಿತ್ತು ಬಿಸಾಡಬೇಕು. ಇಂತಹ ಸಂದರ್ಭದಲ್ಲಿ ಪಕ್ಷ ನಿಮ್ಮ ಜೊತೆ ನಿಲ್ಲದಿರಬಹುದು ಆದರೆ ಮತದಾರ ಪ್ರಭುಗಳು ನಿಮ್ಮ ಜೊತೆ ಇದ್ದಾರೆ.
ಬಿಜೆಪಿಯ ಉನ್ನತ ಮಟ್ಟದ ನಾಯಕರುಗಳು ಕೂಡಾ ಅಥ೯ ಮಾಡಿಕೊಳ್ಳಬೇಕು. ಇಂತಹ ವಿಷಮಸ್ಥಿತಿಯಲ್ಲಿ ಜನ ಏನು ನಿರೀಕ್ಷೆ ಮಾಡುತ್ತಿದ್ದಾರೆ.ಕನಾ೯ಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯ? ಪಕ್ಷದ ಮುಂದಿನ ಚುನಾವಣೆಯ? ನಮಗೆ ಬೇಕಾಗಿರುವುದು ನಮ್ಮ ಪ್ರಾಣ; ನಮ್ಮ ಬದುಕು ಹೊರತು ನಿಮ್ಮ ರಾಜಕೀಯ ಚೆಲ್ಲಾಟವಲ್ಲ. ಅದನ್ನೆಲ್ಲಾ ಸದ್ಯಕ್ಕೆ ಬದಿಗಿಟ್ಟು ನಿಮ್ಮ ಕೆಲಸ ಮೊದಲು ಮಾಡಿ. ಜನರೆಲ್ಲರೂ ಬದುಕಿದ್ದರೆ ಮಾತ್ರ ಮತ್ತೆ ನಿಮ್ಮ ಮುಂದಿನ ರಾಜಕೀಯ ಚುನಾವಣೆ.
ಮುಖ್ಯಮಂತ್ರಿಗಳು ಹಾಗೂ ಪ್ರಧಾನಿ ಮೇೂದಿ ತಕ್ಷಣವೇ ಮಧ್ಯೆ ಪ್ರವೇಶಿಸಿ ಮಸಣದ ಮನೆಯಲ್ಲಿ ಒಣ ಬಣದ ರಾಜಕಾರಣಿಗಳ ಬಾಯಿ ಮುಚ್ಚಿಸುವ ಕೆಲಸ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಿಮ್ಮ ಬಾಯಿ ಮುಚ್ಚಿಸುವ ಕೆಲಸ ಈ ರಾಜ್ಯದ ಜನತಾ ಜನಾರ್ದನ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
إرسال تعليق