1. ಅತಿಶಯದ ಫಲ ದೊರಕುವುದು ಧರ್ಮಪಾಲಕಗೆ
ಇತಿಹಾಸವೋದಿದರೆ ತಿಳಿಯುವುದು ನಮಗೆ |
ಮಿತಿಯಿರದ ಪುಣ್ಯಫಲ ವಶವಾಗೆ ಸಾಯುಜ್ಯ
ಅತಿಸುಖವ ಬಯಸದಿರು - ಪುಟ್ಟಕಂದ ||
2. ಫಲಗಳನು ಬಯಸದೆಯೆ ಕಾಯಕವನೆಸಗಿದರೆ
ನೆಲವು ಹಸನಾಗಿ ಹೊಸಫಲವು ದೊರಕುವುದು |
ಕುಳಿತುಂಬವನಿಗೆ ಕುಡಿಕೆಹಣ ಸಾಲದೆನುವುದು
ಹಳೆಗಾದೆ ಮರೆಯದಿರು - ಪುಟ್ಟಕಂದ ||
3. ಭಗವಂತನೊರೆದಿರುವ ಕರ್ಮಭೂಮಿಯ ಮಹತಿ
ಖಗಮೃಗೋರಗಗಳಿಗು ತಿಳಿಯುವುದು ಸಹಜ |
ನೊಗಧರನ ಒಡವುಟ್ಟಿ ಬಂದಿರುವ ನಗಧರನೆ
ಖಗವಾಹನನು ತಿಳಿಯೊ - ಪುಟ್ಟಕಂದ ||
(ಇಂದಿನ ಛಂದೋಬದ್ಧ ಮುಕ್ತಕ ತ್ರಯ)
-ವಿ.ಬಿ.ಕುಳಮರ್ವ, ಕುಂಬ್ಳೆ
ಸಂಗೀತ ಸಂಯೋಜನೆ-ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
ಗಾಯನ: ಶ್ರೀ ಬಾಲಕೃಷ್ಣ ಆಚಾರ್ಯ ಪುತ್ತಿಗೆ
إرسال تعليق