ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಹಸಿರೇ ಉಸಿರು ಎಂದ ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ತನ್ನ ವೈವಿಧ್ಯಮಯ ಆಚರಣೆಗಳ ಮೂಲಕ  ಶ್ರೀಮಂತ ಸಂಸ್ಕೃತಿ ಎಂಬ ಹಿರಿಮೆಗೆ ಪಾತ್ರವಾಗಿರುವುದು  ಉತ್ತರ ಕನ್ನಡದ  ಹಾಲಕ್ಕಿ ಜನಾಂಗ. ವಿಶಿಷ್ಟ ಜೀವನ ವಿಧಾನ, ಜನಪದ ಆಚರಣೆ, ನೃತ್ಯಗಳ ಮೂಲಕ  ಹಾಲಕ್ಕಿ ಜನಾಂಗ ಗುರುತಿಸಿಕೊಂಡಿದೆ. ಶ್ರೀಮಂತ ಸಂಸ್ಕೃತಿಯ ಈ ಬುಡಕಟ್ಟು ಜನಾಂಗಕ್ಕೆ ಅರಣ್ಯದ ಮೇಲೆ ಅಷ್ಟೇ ಪ್ರೀತಿ. ನಿಸರ್ಗದ ನಡುವೆ ಬಾಳುವ ಈ ಜನಾಂಗ ಗಿಡ-ಮರಗಳನ್ನು ತನ್ನ  ಮಕ್ಕಳಂತೆ ಪೋಷಿಸುತ್ತದೆ.

ಈ ಜನಾಂಗದ ಒಬ್ಬ ಮಹಿಳೆ ತುಳಸಿ ಗೋವಿಂದ ಗೌಡ.ತನ್ನ ಪರಿಸರ ಪ್ರೀತಿಗಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿರುವವರು. ಸಣ್ಣ ವಯಸ್ಸಿನಲ್ಲೇ ಮದುವೆಯಾದ ನಂತರ ಗಂಡನ ಜೊತೆ ಬಡತನದಲ್ಲೆ ಜೀವನ.ಮಕ್ಕಳಿನ್ನೂಸಣ್ಣವರು, ಇದ್ದ 2 ಎಕರೆ ಜಮೀನು ಸಾಗುವಳಿ ಮಾಡಲು ವಯಸ್ಸಾದ  ಗಂಡನಿಗೆ ಕಷ್ಟವಾಗುತ್ತಿತ್ತು. ಅರಣ್ಯ ಇಲಾಖೆಯಲ್ಲಿ ಕೆಲಸ ಇದೆ ಎಂದು ಹೋದ ತುಳಸಿ ಗೌಡ ಕೆಲಸಕ್ಕೆ ಸೇರಿದರು. ಸಂಬಳ ತಿಂಗಳಿಗೆ 1 ರೂಪಾಯಿ 25 ಪೈಸೆ. ಬಡತನ ಮತ್ತು ಮಕ್ಕಳನ್ನು ಸಾಕುವ ಜವಾಬ್ದಾರಿ ತುಳಸಿ ಗೌಡ ಅದೇ ಕೆಲಸ ಮುಂದುವರಿಸುವಂತೆ ಮಾಡಿತು.  

ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಪರಿಸರ ಪ್ರೀತಿ ಬೆಳೆಸಿಕೊಂಡ ತುಳಸಿ ಗೌಡ ಗಿಡಗಳನ್ನೇ ಮಕ್ಕಳೆಂದು ಭಾವಿಸಿದರು. ಇಲಾಖೆಯ ನರ್ಸರಿಯಲ್ಲಿ ಸುಮಾರು 50 ವರ್ಷಗಳ ಕಾಲ ಕೆಲಸ ಮಾಡಿದ ತುಳಸಿ ಗೌಡ ಲಕ್ಷಗಟ್ಟಲೆ ಸಸಿಗಳನ್ನು ಸಿದ್ಧ ಮಾಡಿ ಇಲಾಖೆಗೆ ಕೊಟ್ಟರು. ಎಂದೂ ಸಂಬಳ ಜಾಸ್ತಿ ಮಾಡಿ ಎಂದು ಇಲಾಖೆಗೆ ಕೇಳದೆ ಕೆಲಸ ಮಾಡಿದ ಇವರ ಪರಿಸರ ಪ್ರೀತಿ ಅನನ್ಯ.

ಸುಮಾರು 50 ವರ್ಷಗಳ ಕೆಲಸದ ಅವಧಿಯಲ್ಲಿ 12 ವರ್ಷ ಮಾತ್ರ ಕಾಯಂ ನೌಕರಳಾಗಿ ಕೆಲಸ ಮಾಡಿ ಸರಕಾರಿ ಸಂಬಳ ಪಡೆದ ಇವರು  ಉಳಿದ ವರ್ಷಗಳಲ್ಲಿ ದಿನಗೂಲಿ ನೌಕರಳಾಗಿ ದುಡಿದಿದ್ದರು. ಯಾವ ಲಾಭದ ಉದ್ದೇಶವೂ ಇಲ್ಲದೆ ಬೀಜ ತಂದು ಮೊಳಕೆಯೊಡೆದಂತೆ ಚೀಲದಲ್ಲಿ ಹಾಕಿ ಬೆಳೆಸುವ ತುಳಸಿ ಗೌಡ ಪ್ರತಿಫಲ ಅಪೇಕ್ಷಿಸಿದವರೇ ಅಲ್ಲ . ಪರಿಸರದ ಮೇಲಿನ ದೌರ್ಜನ್ಯಗಳ ಪರಿಣಾಮ ಎದುರಿಸುತ್ತಿರುವ ತೊಂದರೆಗಳ ಸ್ಪಷ್ಟ ಅರಿವು ಹೊಂದಿದ ತುಳಸಿ ಗೌಡ ಅದಕ್ಕಾಗಿ ಕೆಲಸ ಮಾಡಿ "ವೃಕ್ಷ ಮಾತೆ" ಎಂದೆನಿಸಿಕೊಂಡರು. ಕಾಡಿಗೆ ಹೋಗಿ ಮರದ ಬುಡದಲ್ಲಿ ಬಿದ್ದಿರುವ ಬೀಜಗಳನ್ನು ಹೆಕ್ಕಿ ತಂದು  ಗಿಡ ಮಾಡಿ ಇತ್ತೀಚಿನವರೆಗೂ ಅರಣ್ಯ ಇಲಾಖಾ ನರ್ಸರಿಗೆ ನೀಡುತ್ತಿದ್ದರು.

ಕೇಂದ್ರದ ಮಾಜಿ ಮಂತ್ರಿ ಮೇನಕಾ ಗಾಂಧಿ ಇವರು ಕೆಲಸ ಮಾಡುತ್ತಿದ್ದ ಅಂಕೋಲಾದ ಹೊನ್ನಳ್ಳಿ ನರ್ಸರಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

"ಮಕ್ಕಳು-ಮೊಮ್ಮಕ್ಕಳು ಬೇರೆಯಲ್ಲ, ಗಿಡಗಳು ಬೇರೆಯಲ್ಲ"ಎನ್ನುವ ತುಳಸಿ ಗೌಡ "ನಾವು-ನೀವು ಸೇರಿ ಕಾಡು ರಕ್ಷಿಸೋಣ, ಮರ ಇದ್ದರೆ ಮಾತ್ರ ಮಳೆ, ಮಳೆ ಇಲ್ಲದಿದ್ದರೆ ಏನೂ ಇರುವುದಿಲ್ಲ" ಎನ್ನುತ್ತಾರೆ.

ತಮ್ಮ ನಿಸ್ವಾರ್ಥ ದುಡಿಮೆಯ ಮೂಲಕ ಲಕ್ಷಾಂತರ ಗಿಡಗಳನ್ನು ತಯಾರಿಸಿದ ಕಾರ್ಯವನ್ನು ಗುರುತಿಸಿ "ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ" ನೀಡಿ ಗೌರವ.

ಪರಿಸರ ಸಂರಕ್ಷಣೆಯ ಮಹತ್ಕಾರ್ಯವನ್ನು ಗೌರವಿಸಿ ರಾಜ್ಯೋತ್ಸವ, ವೃಕ್ಷಮಿತ್ರ ಪ್ರಶಸ್ತಿ ನೀಡಿ ಸಮ್ಮಾನ.

ಅರಣ್ಯ ನಾಶ ತಡೆಗಟ್ಟುವಲ್ಲಿನ 5 ದಶಕಗಳ ನಿಸ್ವಾರ್ಥ ಸೇವೆಗೆ ಭಾರತ ಸರ್ಕಾರದಿಂದ ಪ್ರತಿಷ್ಠಿತ "ಪದ್ಮಶ್ರೀ" ಗೌರವ.

ಅರಣ್ಯಗಳು ಮನುಷ್ಯನ ಜೀವನಾಡಿ ಇದ್ದಂತೆ. ಅವುಗಳಿಗೆ ಮಾಡುವ ಹಾನಿ ತಿರುಗು ಬಾಣವಾಗಿ ಅಪ್ಪಳಿಸಿದ ದೃಷ್ಟಾಂತ ಈಗ ನಮ್ಮೆದುರಿಗೇ ಇದೆ. ಈ ನಡುವೆ ನಮ್ಮ ಜೀವನವನ್ನು ಹಸಿರು ಮಾಡುವ  ತುಳಸಿ ಗೌಡರಂಥವರೇ ಶ್ರೇಷ್ಠರು.

-ತೇಜಸ್ವಿ. ಕೆ,ಪೈಲಾರು,ಸುಳ್ಯ

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು