ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ನಾಳೆಯಿಂದ ಅರ್ಧ ದಿನ ಓಪನ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 

ಕುಂಬಳೆ: ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ, ಮುಜುಂಗಾವು ನಾಳೆಯಿಂದ (ಜೂನ್ 8ರಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ತೆರೆದು ಕಾರ್ಯಾಚರಿಸಲಿದೆ. ಆದಿತ್ಯವಾರ ರಜಾದಿನವಾಗಿರುತ್ತದೆ.

ಅರ್ಹ ರೋಗಿಗಳು ಇದರ ಉಪಯೋಗವನ್ನು ಪಡೆಯಬಹುದು. ಅಲ್ಲಿಯ ಸೇವೆ ಅಪೇಕ್ಷಿಸುವ ರೋಗಿಗಳು ಮುಂಚಿತವಾಗಿ ವಿಚಾರಿಸಿ ಚಿಕಿತ್ಸಾಲಯಕ್ಕೆ ಹೋಗಬೇಕು ಎಂದು ಆಡಳಿತ ಸಮಿತಿಯ ಕಾರ್ಯದರ್ಶಿ ಇ.ಕೃಷ್ಣ ಮೋಹನ ಭಟ್ಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೋನಾ ನಿಯಮಗಳಿಗೆ ಅನುಸರಿಸಿ ನಿಯಮಿತ ರೋಗಿಗಳನ್ನಷ್ಟೇ ಪರಿಶೀಲಿಸಲು ಸಾಧ್ಯವಾಗ ಬಹುದಾದ್ದರಿಂದ ಮುಂಚಿತವಾಗಿ ವಿಚಾರಿಸದೆ ಹೋದರೆ ನಿರಾಶರಾಗುವ ಸಂದರ್ಭವೂ ಬರಬಹುದು. ಬರುವ ರೋಗಿಗಳು ಹಾಗೂ ಅವರಿಗೆ ಸಹಾಯ ಮಾಡಲು ಬರುವವರು ಕಡ್ಡಾಯವಾಗಿ ಕೊರೋನಾ ನಿಯಮಗಳನ್ನು ಪಾಲಿಸಲೇ ಬೇಕು.

N95 ಮಾಸ್ಕ್ ಅಥವಾ ಕ್ಲಿನಿಕ್‌ ಮಾಸ್ಕಿನೊಂದಿಗೆ ಬೇರೊಂದು ಮಾಸ್ಕನ್ನೂ ಧರಿಸಿರಬೇಕು. ಸಾಧಾರಣ ಕೋಟನ್ ಮಾಸ್ಕ್ ಧರಿಸಿ ಬರ ಬೇಡಿ. ಮಾಸ್ಕ್ ಇಲ್ಲದವರಿಗೆ ಪ್ರವೇಶವಿಲ್ಲ.

ಜ್ವರ ಕೆಮ್ಮು ಅಥವಾ ಇನ್ನಿತರ ಕೊರೋನಾ ಲಕ್ಷಣಗಳು ಇರುವವರಿಗೆ ಪ್ರವೇಶವಿಲ್ಲ.

ಅನಿವಾರ್ಯ ಸಂದರ್ಭಗಳಲ್ಲಿ ಕೊರೋನಾ ನೆಗೆಟಿಯೂ ಸರ್ಟಿಫಿಕೇಟನ್ನು ತರುವಂತೆ ಹೇಳುವ ಅಧಿಕಾರ ಚಿಕಿತ್ಸಾಲಯದ ಸಿಬಂದಿಗಳಿಗೆ ಇದೆ. ಸಾಮಾನ್ಯವಾಗಿ ಅದರ ಅವಶ್ಯವಿಲ್ಲ. ಚಿಕಿತ್ಸಾಲಯದ ಸಿಬಂದಿಗಳು ಹೇಳಿದ ನಿಯಮಗಳನ್ನು ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಯಾನಿಟೈಸರ್ ಚಿಕಿತ್ಸಾಲಯದಲ್ಲಿ ಇರುತ್ತದೆ. ಅದರ ಉಪಯೋಗ ಮಾಡಲು ಮರೆಯದಿರಿ.  ಹೆಚ್ಚಿನ ವಿವರ ಬೇಕಾದವರು ನಾಳೆ ಬೆಳಗ್ಗೆ 9:30 ರ ವರೆಗೆ 8547522364 ನಂಬರನ್ನು ಸಂಪರ್ಕಿಸ ಬಹುದು. ನಾಳೆ ಬೆಳಗ್ಗೆ 9:30ರ ನಂತರ ಕೆಳಗೆ ನೀಡಲಾದ ಚಿಕಿತ್ಸಾಲಯದ ಸಂಪರ್ಕ ಸಂಖ್ಯೆಯನ್ನು ಉಪಯೋಗಿಸಿ ಎಂದು ಕೋರಲಾಗಿದೆ.

ಸಂಪರ್ಕ ಸಂಖ್ಯೆ

Reception - 9495246474

Office - 04998-214466

Pharmacy &Opticals -

04998 - 214455

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم