ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವನಸಂಪತ್ತು (ಮುಕ್ತಕಗಳು) ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


  

ಮರವಿರದೆ ಮಾನವನ ಜೀವನಕೆ ಬೆಲೆಯಿರದು  

ಗುರುವಿನುಪದೇಶ ಕೇಳದಿರೆ ನೆಲೆಯಿರದು | 

ತರುಕುಲವ ತರಿಯದೆಯೆ ಸೊಂಪಾಗಿ ಬೆಳೆಸಿದರೆ 

ವರವಹುದು ಆರೋಗ್ಯ - ಪುಟ್ಟಕಂದ || 

                                  || ೧ || 

ವನದೊಳಗೆ ಬೆಳೆಯುತಿರೆ ಘನವೆತ್ತ ಸಂಪದವು 

ಮನವರಳಿ ಸುಮದಂತೆ ಕಂಪು ಸೂಸುವುದು | 

ತನುಮನಕೆ ಆರೋಗ್ಯಭಾಗ್ಯಗಳ ತವನಿಧಿಯು  

ಅನುವಶದ ವರವಕ್ಕು - ಪುಟ್ಟಕಂದ || 

                                    || ೨ || 

ವೃಕ್ಷದಲಿ ಗೆಲ್ಲುಗಳು ಮತ್ತೆ ಹಸುರೆಲೆ ಚಂದ  

ಪಕ್ಷಿಗೂಡೊಳು ಪುಟ್ಟ ಸಂಸಾರ ಬಂಧ | 

ಅಕ್ಷಿಯಲಿ ಚೆಲುನೋಟ ಮನುಜನಿಗೆ ಸಹಜತೆಯು 

ಲಕ್ಷ ಗಿಡಗಳ ಸಲಹೊ - ಪುಟ್ಟಕಂದ || 

                                    || ೩ || 

ಗಿಡನೆಟ್ಟು ಬೆಳೆಸಿದರೆ ಹೂವಾಗಿ ಫಲದೊರೆತು 

ಮೃಡ ನಿನ್ನ ಹರಸುವನು ಸುಖವ ನೀಡುವನು | 

ಜಡತೊರೆದು ಮುದದಿಂದ ಕಾಯಕವನೆಸಗಿದರೆ 

ಕಡೆತನಕ ಗೆಲವಿಹುದು - ಪುಟ್ಟಕಂದ ||  

                                      || ೪ ||  

ಮರಬೇಕು ತೊಟ್ಟಿಲಿಗೆ ಹರಿಯೊಲಿದ ಕಂದನಿಗೆ 

ಮರವೆ ಭಗವಂತ ನಿತ್ತಿಹ ವರವು ನಮಗೆ | 

ಮರಗಿಡವ ಪೋಷಿಸಲು ಆರೋಗ್ಯ ಮನುಜರಿಗೆ  

ಮರವೆ ದೇವರ ವರವು - ಪುಟ್ಟಕಂದ || 

                                     || ೫ ||    

(ಇಂದಿನ ದಿನವಿಶೇಷದ ಆಶು ಮುಕ್ತಕ ಪಂಚಕ) 

- ವಿ.ಬಿ.ಕುಳಮರ್ವ , ಕುಂಬ್ಳೆ 

ರಾಗಸಂಯೋಜನೆ ಮಾಡಿ ಹಾಡಿದವರು ಹಿರಿಯ ಗಮಕಿ ಕಲಾಶ್ರೀ ವಿದ್ಯಾಶಂಕರ ಮಂಡ್ಯ


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

أحدث أقدم