ತುಳುನಾಡಿನ ಹೆಸರಾಂತ ಜಾನಪದ ವಿದ್ವಾಂಸ ಹಾಗೂ ಪ್ರಾಧ್ಯಾಪಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು ಮಂಗಳೂರಿನ ರೇಡಿಯೋ ಸಾರಂಗ್- ಸಮುದಾಯ ಬಾನುಲಿಗಾಗಿ ನಡೆಸಿಕೊಡುತ್ತಿರುವ, ತುಳುನಾಡಿನ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳನ್ನು ಬಿಂಬಿಸುವ ವಿಶೇಷ ಕಾರ್ಯಕ್ರಮ- ಗೇನದ ನಡೆ'ಯ ಒಂದು ಝಲಕ್ ಇದು. ಡಾ. ಸಂಕಮಾರ್ ಅವರ ಸುಂದರ ನಿರೂಪಣೆಯನ್ನು ಆಲಿಸಿ. ತುಳುನಾಡಿನ ಪ್ರಕೃತಿ ಚಿತ್ರಣದ ಕಲೆಗಾರ ಅನೂಪ್ ಸೂರಿಂಜೆ ಅವರ ಕ್ಯಾಮರಾ ಚಳಕದಲ್ಲಿ ಮೂಡಿಬಂದ ಚಿತ್ರಗಳನ್ನೂ ಜತೆಗೆ ಆಸ್ವಾದಿಸಿ.
ಈ ಬಾರಿಯ ಗೇನದ ನಡೆ- ಆಯುರ್ವೇದ ಸತ್ವದ ಆಟಿ (ಆಷಾಢ) ಕಷಾಯದ ಬಗ್ಗೆ ಹಾಗೂ ಆಟಿ ತಿಂಗಳ ವಿಶೇಷತೆಯ ಬಗ್ಗೆ.
ಕಾರ್ಯಕ್ರಮ ನಡೆಸಿಕೊಡುತ್ತಿರುವ ಡಾ. ಗಣೇಶ್ ಅಮೀನ್ ಸಂಕಮಾರ್, ರೇಡಿಯೋ ಸಾರಂಗ್‌ನ ಕಾರ್ಯಕ್ರಮ ನಿರೂಪಕ ಅಭಿಷೇಕ್ ಶೆಟ್ಟಿ, ಅಂದದ ಚಿತ್ರಗಳನ್ನು ಹೊಸೆದು ವೀಡಿಯೋ ರೂಪಿಸಿದ ಅನೂಪ್ ಸೂರಿಂಜೆ ಅವರಿಗೆ ವಿಶೇಷ ಕೃತಜ್ಷತೆಗಳು.
ಉಪಯುಕ್ತ ನ್ಯೂಸ್ ಓದುಗರು/ ವೀಕ್ಷಕರು/ ಶ್ರೋತೃಗಳಿಗಾಗಿ ಈ ವೀಡಿಯೋ:
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق