ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಜ್ಯೋತಿರ್ವಾಣಿ- ಶುಭೋದಯದ ಜೇನ ಹನಿಗಳು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adಬೀಳದಿರು ಬೀಳದಿರು ಬೀಳದಿರು ಮಿಹಿರಾ ಬಿದ್ದರೂ ನಾನಿರುವೆ ಎನುವೆ ಬೊಗಸೆ ನಸುಕು


ಕನಸಿನಲ್ಲಿ ಹೊರಳಿ ಹೊರಳಿ ಆಚೆಬದಿಗೆ ಬಿದ್ದ ಅವನ

ಎಳೆದು ತರಲು ಬಳ್ಳಿಯೆಳೆಯ ಇಳಿಸಿ ಕರೆವ ತಾಳ್ಮೆನಸುಕು


ಜಗದಗಲ ಅಲೆದಲೆದು ಸುತ್ತಾಡಿ ಸಾಕಾಗಿ

ಮರಳಿ ಮನೆಯಂಗಳಕೆ ಬಂದಿಳಿದ ಕೆನ್ನಸುಕು


ಅರಳು ಹೂವಿನ ನಡುವೆ ಮಗ್ಗುಲೇಳುವ ನಸುಕು


ಎಲ್ಲಿಂದಲೋ ಹೊರಟವನು

ಇಲ್ಲಿಳಿದು ಬಂದಾಗ

ಚಾಮರ ಸ್ವಾಗತದ

ಹಸಿಗಾಯಿ ನಸುಕು


ಇಂಗು ತೆಂಗಿನ ಜೊತೆಗೆ

ಅಡುಗೆಮನೆಯಾಳುತ್ತ

ಖಾದ್ಯದೌನ್ನತ್ಯವನು

ಹೆಚ್ಚಿಸುವ ಘಮನಸುಕು


ನೂರಂತೆ ಐದಂತೆ ಮತ್ತೊಂದು ಮೇಲ್ಮೂರು

'ಜಯ'ದ ಕಥೆಯಿದು ಎಂದು ಭ್ರಮಿಸುವ ಹೂನಸುಕು


ಆಗಸಕೆ ಸಾಲುಗಂಬ

ಏರಿಸಿಟ್ಟ ಮುಗುಳ್ನಸುಕು


ಮಾಗಿ ಬಾಗುವ ತನಕ

ತೂಗಿ ಬೆಳೆಯುವ ನಸುಕು


ಕರೆದೊಡನೆ ಬಾರದೆಯೆ

ವೈಯ್ಯಾರ ತೋರುವ

ನಖ್ರಾನಸುಕುಅತ್ತಿಕಾಯಿಯ ಹಿಂದೆ

ಅಡಗಿ ನಿಲುವವನನ್ನು

ಸುತ್ತುವರೆದು ಮುತ್ತನೆರೆದು

ಮುದ್ದುಗರೆದು ನಲಿವ ಬೆಳಗು


ಬಾನಮ್ಮನ ಮೂಡೊಲೆಯಲ್ಲಿ

ಬಿಸಿನೀರಾಗುವ ಹೊಗೆನಸುಕು


ಮಮತೆಯಿಂದ ಮುಖ ತೋರಿದವಗೆ

ಮತ್ತೆ ಮುತ್ತಿನಾರತಿಯ ಬೆಳಗು


ಇರುಳು ಸುರಿದ

ಹನಿಯ ಜೊತೆಗೆ

ಹರಿದು ಬಂದ

ಚುಕ್ಕಿ ಬೆಳಗು


ಹಸಿರು ಸೇತುವೆ ಮೇಲೆ

ಮುತ್ತುಮಣಿ ಸಾಲ್ಬೆಳಗು


ಪಂಚ

ದೀಪಾರತಿಯ

ಪಚ್ಚೆಬೆಳಗು


*ಸುಪ್ತದೀಪ್ತಿ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿPost a Comment

ನವೀನ ಹಳೆಯದು