ಆಲಿಸಿ: ಭಕ್ತಿಗೀತೆ- ಗುಮ್ಮನ ಕರೆಯದಿರೆ ಅಮ್ಮಾ ನೀ
ಗಾಯನ : ವಿದ್ಯಾ ಭೂಷಣರು
ಸಾಹಿತ್ಯ :- ಪುರಂದರ ದಾಸ
ಗುಮ್ಮನ ಕರೆಯದಿರೆ, ಅಮ್ಮ ನೀನು
ಗುಮ್ಮನ ಕರೆಯದಿರೆ ।।
ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು..
ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲ ..
|| ಪಲ್ಲವಿ||
ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ
ಕಣ್ಣ ಮುಚ್ಚುವುದಿಲ್ಲವೆ..
ಚಿನ್ನರ ಬಡಿಯೆನು ಅಣ್ಣನ ಬೈಯೆನು..
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ ..
|| ಪಲ್ಲವಿ||
ಬಾವಿಗೆ ಪೋಗೆ ಕಣೆ, ಅಮ್ಮ ನಾನು
ಹಾವಿನೊಳಾಡೆ ಕಣೆ..
ಆವಿನ ಮೊಲೆಯೂಡೆ ಕರುಗಳ ಬಿಡೆನೋಡೆ..
ದೇವರಂತೆ ಒಂದು ಠಾವಿಲಿ ಕೂರುವೆ..
||ಪಲ್ಲವಿ||
ಮಗನ ಮಾತನು ಕೇಳುತ ಗೋಪಿದೇವಿ
ಮುಗುಳು ನಗೆಯ ನಗುತ..
ಜಗದೊಡೆಯನ ಶ್ರೀ ಪುರಂದರ ವಿಠಲನ..
ಬಿಗಿದಪ್ಪಿಕೊಂಡಳು ಮೋಹದಿಂದಲಾಗ..
||ಪಲ್ಲವಿ||
إرسال تعليق