ಆಲಿಸಿ: ಭಕ್ತಿಗೀತೆ- ಇಟ್ಟಿಗೆ ಮೇಲೆ ನಿಂತಾನಮ್ಮ ವಿಠ್ಠಲ ತಾನು
ರಚನೆ: ಶ್ರೀ ಪುರಂದರ ದಾಸರು
ಇಟ್ಟಿಗೆ ಮೇಲೆ ನಿಂತಾನಮ್ಮ ವಿಠ್ಠಲ ತಾನು ||2||
ಪುಟ್ಟ ಪಾದ ಊರಿದನು ದಿಟ್ಟ ತಾನು||2||
ಪುಟ್ಟಪಾದ ಊರಿದನು ಗಟ್ಟಿಯಾಗಿ ನಿಂತಾನಮ್ಮ
ಠೊಂಕದ ಮೇಲೆ ಕೈಯನಿಟ್ಟು
ಭಕ್ತರು ಬರುವುದ
ನೋಡುವನಮ್ಮ||2||
ಇಟ್ಟಿಗೆ ಮೇಲೆ....ರಂಗ ಇಟ್ಟಿಗೆ ಮೇಲೆ.... ವಿಠ್ಠಲ
||ಇಟ್ಟಿಗೆ||
ಪಂಡರಪುರದಲಿ ಇರುವನಮ್ಮ ಪಾಂಡುರಂಗನೆಂಬುವರಮ್ಮ||2||
ಚಂದ್ರಭಾಗಪಿತನಿವನಮ್ಮ
ಅಂಗನೆ ರುಕ್ಮಿಣಿ ಅರಸನಮ್ಮಾ||2||
ಇಟ್ಟಿಗೆ ಮೇಲೆ...ರಂಗ ಇಟ್ಟಿಗೆ ಮೇಲೆ.... ವಿಠ್ಠಲ
|| ಇಟ್ಟಿಗೆ||
ಕನಕದಾಸೆ ಇವಗಿಲ್ಲವಮ್ಮ ಹಣವು
ಇವಗೆ ಬೇಕಿಲ್ಲವಮ್ಮ||2||
ನಾದಬ್ರಹ್ಮನೆಂಬುವರಮ್ಮ ಭಕ್ತರ ಭಜನೆ ಸಾಕಿವಗಮ್ಮ||2||
ಇಟ್ಟಿಗೆ ಮೇಲೆ....ರಂಗ ಇಟ್ಟಿಗೆ ಮೇಲೆ.... ವಿಠ್ಠಲ
|| ಇಟ್ಟಿಗೆ||
ಕರಿಯಕಂಬಳಿ ಹೊದ್ದಿಹನಮ್ಮ
ಹಣೆಗೆ ನಾಮ ಹಚ್ಚಿಹನಮ್ಮ||2||
ತುಲಸಿ ಮಾಲೆ ಹಾಕಿಹನಮ್ಮ
ಪುರಂದರವಿಠಲನಿಗೊಲಿದಿಹನಮ್ಮ
ವಿಠ್ಠಲ ವಿಠ್ಠಲ ಪುರಂದರ ವಿಠ್ಠಲ
ವಿಠ್ಠಲ ವಿಠ್ಠಲ ಪುರಂದರ ವಿಠ್ಠಲ
ವಿಠ್ಠಲ ವಿಠ್ಠಲ ಜಯ ಹರಿ ವಿಠ್ಠಲ
ವಿಠ್ಠಲ ವಿಠ್ಠಲ ಜಯ ಹರಿ ವಿಠ್ಠಲ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ....
إرسال تعليق